ದೊಡ್ಡಣ್ಣನ ದೊಡ್ಡಸ್ತಿಕೆ

0
184

ಅಮೆರಿಕ ಪ್ರಪಂಚದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ದೇಶ ಪ್ರಪಂಚದ ಉಸಾಬರಿ ವಹಿಸಿಕೊಳ್ಳಲು ಮುಂದಾಗುವುದು ಹೊಸದೇನಲ್ಲ. ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ‘ಅವರು’ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಕಾಶ್ಮೀರ ವಿವಾದಗಳಿಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಮತ್ತೊಮ್ಮೆ ತಿಳಿಸಿದ್ದು , ಆದರೆ ಅವರು ಎಂಬ ಪದಕ್ಕೆ ಸ್ಪಷ್ಟನೆಯನ್ನು ಮಾತ್ರ ನೀಡಿಲ್ಲ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿದರೆ ಮಾತ್ರ ದಶಕಗಳ ಸಮಸ್ಯೆಯನ್ನು ಪರಿಹರಿಸುವುದಾಗಿ ಮಧ್ಯಪ್ರವೇಶಿಸಲು ಸಿದ್ಧ ಎಂದಿದ್ದಾರೆ. ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ,ಒಪ್ಪಿಕೊಳ್ಳದೆ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಷಯ ಎಂಬುದಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಇನ್ನೆರಡು ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಆರಂಭಗೊಳ್ಳುವುದು ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ . ಕೆಲವು ದಿನಗಳಿಂದ ಪಾಕಿಸ್ತಾನದ ಬಗೆಗೆ ಕನಿಕರ ಅಮೆರಿಕದ ಅಧ್ಯಕ್ಷರಿಗೆ ಹೆಚ್ಚಾಗಿದ್ದು ಪಾಕ್ ಗೆ ನಿಲ್ಲಿಸಿದ್ದ ಮಿಲಿಟರಿ ಧನಸಹಾಯವನ್ನು ಪುನಹ ನೀಡಲಾರಂಭಿಸಿದೆ. ಇದ್ದಕ್ಕಿದ್ದಂತೆ ಸ್ಪೋಟಕದಂತೆ ಟ್ರಂಪ್ ರವರು ಕಾಶ್ಮೀರ ಸಮಸ್ಯೆಯ ಕುರಿತು ಮಾತನಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರವರು ಅಮೆರಿಕ ಭೇಟಿ ನೀಡಿದ್ದಾಗ ಮಾತುಕತೆಯಲ್ಲಿ ಭಾರತೀಯ ಪ್ರಧಾನಿ ಕಾಶ್ಮೀರ ತನ್ನ ಮಧ್ಯಸ್ಥಿಕೆ ವಹಿಸಲು ಬಯಸಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು , ವಾಕ್ಯಗಳ ಬಗೆಗೆ ಭಾರತ ಖಂಡಿಸಿತ್ತು , ಈ ವಿಷಯಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರು ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು ,ಅದರ ಅವಶ್ಯಕತೆ ನಮಗೆ ಇಲ್ಲ ಎಂದು ಪ್ರಪಂಚಕ್ಕೆ ಮನವರಿಕೆ ಮಾಡಿತ್ತು.
ಗುರುವಾರ ವೈಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಯದಲ್ಲಿ ಪತ್ರಕರ್ತರ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ರವರು ಇಮ್ರಾನ್ ಖಾನ್ ಮತ್ತು ನರೇಂದ್ರ ಮೋದಿ ರವರು ಅದ್ಭುತ ವ್ಯಕ್ತಿಗಳು ಇಬ್ಬರು ಹೊಂದಿಕೊಳ್ಳಬಹುದು ಅವರಾಗಿ ಇಚ್ಚಿಸಿದರೆ ಮಧ್ಯಸ್ತಿಕೆ ವಹಿಸುವಂತೆ ಕೇಳಿದರೆ , ಮಾತ್ರ ವಹಿಸುವುದಾಗಿ ತಿಳಿಸಿದ್ದಾರೆ ಹಾಗೂ ಎರಡು ದೇಶಗಳೊಂದಿಗೆ ಪ್ರಾಮಾಣಿಕವಾಗಿ ಇರುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here