ದಿನ ಭವಿಷ್ಯ ಆಗಸ್ಟ್ ೨೪ ೨೦೧೯

0
786

ಇಂದು ಕೊನೆಯ ಶ್ರಾವಣ ಆಗಿರುವುದರಿಂದ ಶ್ರಾವಣ ಶನಿವಾರಗಳಲ್ಲಿ `ಶ್ರವಣಂ’ ಎಂದು ಕರೆಯುತ್ತಾರೆ. ಎಷ್ಟು ಶ್ರವಣ ಭಗವದ್ಗೀತೆಯನ್ನು, ಭಗವದ್ಗೀತೆ ಲೀಲೆಗಳನ್ನು, ಗುರುಗಳ ಲೀಲೆಗಳನ್ನು, ಮಹರ್ಷಿಯ ಲೀಲೆಗಳನ್ನು ಕೇಳ್ತೀವಿ ಅಷ್ಟು ನಮ್ಮಲ್ಲಿ ಒಳ್ಳೆ ಭಾವಗಳು ಮೂಡುತ್ತದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಾವು ಕೇಳುವ ಸ್ಥಿತಿಯಲ್ಲಿ ಇಲ್ಲ! ಅಂಥ ಪ್ರಸಂಗಗಳು ನಮಗೆ ಎದುರಾಗಿವೆ. ನಮ್ಮ ಮಾತಿನಿಂದ ಇನ್ನೊಬ್ಬರನ್ನು ಅವಮಾನಿಸುವುದು ಹೆಚ್ಚಾಗಿದೆ. ನಮ್ಮ ಕೆಲಸದ ಬಗ್ಗೆ ನಾವು ಯೋಚಿಸುವುದು ಬಿಟ್ಟು, ಇನ್ನೊಬ್ಬರಿಗೆ ಕೊಂಕು ಮಾತಿನಿಂದ ನೋಯಿಸುವ ಜನರೆ ಹೆಚ್ಚು. ಶ್ರಾವಣ ಎಂದರೆ ಇನ್ನೊಬ್ಬರಿಗೆ ಪೋಷಿಸುವುದು, ಶ್ರೇಷ್ಠ ದಾನ, ಅನ್ನದಾನ ಮಾಡುವುದು ಇಂಥ ಒಂದು ಒಳ್ಳೆಯ ಕೆಲಸಗಳನ್ನು ರೂಢಿಸಿಕೊಳ್ಳಿ ಬಹಳ ಒಳ್ಳೆಯದಾಗಲಿದೆ. ಸಿಂಹ ರಾಶಿಯವರಿಗೆ ಅಪಘಾತದ ಮುನ್ಸೂಚನೆ ಕಾಡಲಿದೆ.
ಈ ವಾರದಲ್ಲಿ ಅಪಘಾತಗಳು ನಿಮಗೆ ಕಾಡಲಿದೆ ಬಹಳ ಜಾಗೃತೆಯಿಂದ ಇರಬೇಕಾಗಿದೆ. ಬೆಂಕಿ ಅವಘಡಗಳು ಸಂಭವಿಸಲಿವೆ, ಸಂಗಾತಿ ವಿಚಾರದಲ್ಲಿ, ವ್ಯವಹಾರ ವಿಚಾರದಲ್ಲಿ, ವ್ಯಾಪಾರ ವಿಚಾರದಲ್ಲಿ ವಿಪರೀತ ಉದ್ವೇಗ. ಮನೆಯಲ್ಲಿ ಪಿತೃ ದೋಷದ ಒಂದು ಸಮಸ್ಯೆಯಿದೆ. ಪತಿಯ ತಂದೆ, ಪತ್ನಿಯ ತಂದೆ ಈ ರೀತಿಯ ಹಿರಿಯರಲ್ಲಿ ಒಂದು ದೋಷ ಕಾಣಲಿದೆ. ಮನೆಯಲ್ಲಿ, ಕುಟುಂಬದಲ್ಲಿ ಯಾರಿಗಾದರೂ ಒಂದು ಆಪರೇಷನ್ ಆಗುವಂಥ ಸಮಸ್ಯೆಗಳು, ಭೂಮಿ ವ್ಯವಹಾರದಲ್ಲಿ ಹಿನ್ನಡೆ ಆಗುವಂತ ಸನ್ನಿವೇಶಗಳು ಎದುರಾಗಲಿವೆ, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂಬುದು ಸತ್ಯ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ವಿಶೇಷ ಸುಖ, ತೃಪ್ತಿ ಶ್ರಾವಣದ ಕೊನೆಯ ದಿನ ನಿಮಗೆ ಸಿಗಲಿದೆ. ಮನೆಯಲ್ಲಿ ಹಬ್ಬದೂಟ ಅತಿಥಿಗಳ ಆಗಮನ, ವಿಷ್ಣು ದರ್ಶನ ಉಂಟಾಗಲಿದೆ ಶುಭಾವಾಗಲಿ.

ವೃಷಭ– ತುಂಬಾ ಮುಂಚಿತವಾಗಿ ಪ್ಲಾನ್ ಮಾಡಿ ಹಣವನ್ನು ಶೇಖರಣೆ ಮಾಡಿಕೊಂಡಿದ್ದೀರಿ. ನಿದ್ದೆ ಬರದ ಪರಿಸ್ಥಿತಿ ನಿಮಗೆ ಕಾಡುತ್ತಿದೆ. ಇಂದು ನಿಮ್ಮ ಸ್ಥಿತಿ ಅಂಡು ಸುಟ್ಟ ಬೆಕ್ಕಿನ ಹಾಗೆ ಇರುತ್ತದೆ ಜಾಗೃತ.

ಮಿಥುನ– ಪರವಾಗಿಲ್ಲ. ಆರೋಗ್ಯವನ್ನು ನೋಡಿಕೊಳ್ಳಿ, ಹೃದಯ,ಮೈಗ್ರೇನ್ ಇಲ್ಲವೇ ಮೂಗಿನ ಸಮಸ್ಯೆ ಉಂಟಾಗಲಿದೆ ಜಾಗೃತ, ಎಚ್ಚರಿಕೆ ವಹಿಸಿ. ಇಂದು ಬಹಳ ಸಂಕಟಕ್ಕೆ ಒಳಗಾಗುತ್ತೀರಿ, ನಿಮ್ಮ ದುಃಖವನ್ನು ತೋಡಿಕೊಳ್ಳುತ್ತೀರಿ. ಯಾರೋ ನಿಮ್ಮ ಹತ್ತಿರದವರೇ ನಿಮಗೆ ಕಣ್ಣೀರು ಹಾಕಿಸುತ್ತಾರೆ ಜಾಗ್ರತ.

ಕಟಕ– ಇಂದು ನಿಮ್ಮ ದಿನ ಚೆನ್ನಾಗಿದೆ. ಅಂದುಕೊಂಡಿರುವ ಸಕಲ ಕಾರ್ಯ, ವ್ಯವಹಾರಗಳು, ಜೇನುತುಪ್ಪ, ಮೊಸರು ಎಲ್ಲದರಲ್ಲೂ ಚೆನ್ನಾಗಿದೆ. ಲಾಭದಿಪತ್ತಿ ನಿಮ್ಮ ಕುಟುಂಬದಲ್ಲಿ ಕುಳಿತಿದ್ದು, ಅದರಿಂದ ಕುಟುಂಬ ವೃದ್ಧಿ, ಕೊಡುವುದು, ತೆಗೆದುಕೊಳ್ಳುವುದು, ಎಂಟರ್ಟೈನ್ಮೆಂಟ್, ಥಿಯೇಟರ್, ಕ್ಲಬ್ ಇವೆಲ್ಲವುಗಳಲ್ಲಿ ವಿಶೇಷ ಪ್ರಗತಿ ನೋಡುತ್ತೀರಿ ಶುಭವಾಗಲಿದೆ.

ಸಿಂಹ– ಪರಸ್ಥಳದಲ್ಲಿ ಯಾವುದೋ ವ್ಯಾಪಾರ ಮಾಡುತ್ತಿದ್ದೀರಿ. ಹೊರ ಪ್ರದೇಶದಲ್ಲಿ ವ್ಯಾಪಾರ ಮಾಡಬೇಕೆಂಬ ಯೋಚನೆ ಮಾಡುತ್ತಿದ್ದೀರಿ ಅಲ್ಲೊಂದು ತಲ್ಲಣ ಉಂಟಾಗಲಿದ್ದು, ನಿಭಾಯಿಸಿಕೊಳ್ಳುವ ದಿನ ಚೆನ್ನಾಗಿದೆ. ಇಂದು ದೇವಿಯ ದೇವಸ್ಥಾನಕ್ಕೆ ಹೋಗಿ ಒಂದು ಕೊಬ್ಬರಿಯ ದೀಪವನ್ನು ಹಚ್ಚಿ ಬನ್ನಿ ಶುಭವಾಗಲಿದೆ.

ಕನ್ಯಾ– ದೂರ ಪ್ರಯಾಣ, ದೂರ ಕೆಲಸ, ದೂರ ವಿಹಾರ, ಹೂವುಗಳ ವ್ಯಾಪಾರ ವಿಚಾರದಲ್ಲಿ ಎನ್ನೋ ತಲ್ಲಣ ಉಂಟಾಗಲಿದೆ. ಇಂದು ನಿಮ್ಮ ಮನಸ್ಸಿಗೆ ಯಾರೋ ಉಳಿ ಬಿಡುವುದು ಅಥವಾ ನಿಮ್ಮ ನಿಮಗೆ ನೀವೇ ಹುಳಿ ಬಿಟ್ಟುಕೊಳ್ಳುವುದು ಇಂಥ ಪರಿಸ್ಥಿತಿ ಎದುರಾಗಲಿದೆ ಜಾಗೃತ.

ತುಲಾ– ಪರವಾಗಿಲ್ಲ ಇಂದು ನಿಮ್ಮ ದಿನ ಚೆನ್ನಾಗಿದೆ. ಮನಸ್ಸಿಗೆ ಏನೋ ತಳಮಳ ಉಂಟಾಗಲಿದೆ. ಯಾವ ಸ್ಥಿತಿ ಯಾರಿಗೆ ಯಾವಾಗ ಕೊಡಬೇಕು ಎಂಬುದನ್ನು ಭಗವಂತ ನಿಶ್ಚಯಿಸಿದ್ದಾನೆ, ಯೋಚಿಸಬೇಡಿ ಧೈರ್ಯವಾಗಿ ಹೆಜ್ಜೆ ಇಡಿ ಶುಭವಾಗಲಿದೆ.

ವೃಶ್ಚಿಕ– ಇಂದು ಅದ್ಭುತ ಪ್ರಗತಿಯನ್ನು ಕಾಣುವಂತ ದಿನ ಚೆನ್ನಾಗಿದೆ. ನೀವು ಮಾಡುವ ಪ್ರತಿ ಕೆಲಸದಲ್ಲಿ ಅದ್ಭುತ ಪ್ರಗತಿಯನ್ನು ನೋಡುವಂಥ ದಿನ. ಇಂದು ನಿಮ್ಮ ದಿನವೇ ಯಾವುದಕ್ಕೂ ಹೆದರಬೇಡಿ ಶುಭವಾಗಲಿದೆ.

ಧನಸ್ಸು– ಇಂದು ನಿಮ್ಮ ದಿನ ಚೆನ್ನಾಗಿದೆ. ಗಾಬರಿ ಪಡುವಂತಹ ಸನ್ನಿವೇಶ, ಪರಿಸ್ಥಿತಿಗಳು ಇಲ್ಲ ಧೈರ್ಯದಿಂದ ಇರುವುದು ಸೂಕ್ತ. ಇಂದು ಯಾವುದೇ ಲಾಭವನ್ನು ನೋಡುತ್ತೀರಿ ಲಾಭ ಯಾವ ಕಡೆಯಿಂದ ಬರುತ್ತದೆ ಎಂಬುದು ಗ್ಯಾರಂಟಿ ಇಲ್ಲ, ಆದರೆ ಲಾಭವನ್ನು ನೋಡುತ್ತೀರಿ ಶುಭವಾಗಲಿದೆ.

ಮಕರ– ಪರವಾಗಿಲ್ಲ ಇಂದು ನಿಮ್ಮ ದಿನ ಚೆನ್ನಾಗಿದೆ. ಶುಭ ಸುದ್ದಿಯೊಂದನ್ನು ಕೇಳ್ತೀರಿ. ಹಾಲು, ಬೆಣ್ಣೆ, ತುಪ್ಪ,ಮೊಸರು, ತರಕಾರಿ, ರೈತರಾಗಿದ್ದೀರಿ, ಹಣ್ಣುಗಳ ವ್ಯಾಪಾರ ಅದರಲ್ಲಿ ತೊಡಗಿಸಿಕೊಂಡಿರುವವರಿಗೆ ಇಂದು ಅದ್ಭುತ ಪ್ರಗತಿ ಕಾಣುವಂತ ದಿನ ಚೆನ್ನಾಗಿದೆ.

ಕುಂಭ– ತಾಯಿ ಆರೋಗ್ಯದಲ್ಲಿ ಜಾಗ್ರತೆ. ಸಂಗಾತಿ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ದಿಢೀರ್ ಪ್ರಯಾಣ ಉಂಟಾಗಲಿದೆ. ದೇವದರ್ಶನ, ಗುರುದರ್ಶನ, ಆತ್ಮೀಯರ ದರ್ಶನ ಇವುಗಳನ್ನು ಪಡೆಯುವಂಥ ಶುಭಯೋಗ ಇಂದು ನಿಮಗೆ ದೊರೆಯಲಿದೆ ಒಳ್ಳೆಯದಾಗಲಿ.

ಮೀನ– ಇಂದು ನೀವು ಮುಟ್ಟಿದ್ದೆಲ್ಲ ಬಂಗಾರವೆ. ಸ್ತ್ರೀಯೊಬ್ಬರಿಂದ ನೋವುಂಟಾಗಲಿದೆ. ಕಲಾವಿದರು, ಆರ್ಟಿಸ್ಟ್, ರಿಯಲ್ಎಸ್ಟೇಟ್, ಇಂಜಿನಿಯರಿಂಗ್, ಆರ್ಕಿಟೆಕ್ಟ್ ಆಗಿದ್ದರೆ ಎಲ್ಲೋ ಒಂದು ತೊಳಲಾಟ ಉಂಟಾಗಲಿದೆ.ದಾಂಪತ್ಯ ಜೀವನದಲ್ಲಿ ಒಂದು ಬಿರುಕು ಉಂಟಾಗುವ ಸನ್ನಿವೇಶಗಳು ಎದುರಾಗಲಿವೆ ಜಾಗೃತ ಶುಭವಾಗಲಿ.

LEAVE A REPLY

Please enter your comment!
Please enter your name here