ದಿನ ಭವಿಷ್ಯ ಆಗಸ್ಟ್ ೧೨ ೨೦೧೯

0
226

ಮೇಷ– ಯಾವ ಕೆಲಸ ಕಾರ್ಯವನ್ನು ಮಾಡಬೇಕು ಎಂದುಕೊಂಡಿದ್ದೀರಿ. ಅದನ್ನು ಕೂಡಲೇ ಮಾಡಿ ಮುಗಿಸಿ ಒಳ್ಳೆಯದಾಗಲಿದೆ. ನಿಮ್ಮ ಕೆಲಸಗಳಿಗೆ ರೂಪುರೇಷೆಯನ್ನು ನೀವೇ ನಿರ್ಮಾಣ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ವೃಷಭ– ಇದು ಅಲಂಕಾರಿಕ ದಿನ,ಒಪ್ಪ ಓರಣದ ದಿನ. ಇವತ್ತು ನೀವು ತುಂಬಾ ಲಕ್ಕಿ ವ್ಯಕ್ತಿಗಳು ಎಂದೇ ಹೇಳಬಹುದು. ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ ಒಳ್ಳೆಯದಾಗಲಿದೆ.

ಮಿಥುನ– ಇಂದು ನಿಮ್ಮ ದಿನ ಚೆನ್ನಾಗಿದೆ. ಅಂದುಕೊಂಡಂತ ಕೆಲಸಗಳು ಸುಗಮವಾಗಲಿದೆ. ಹಾಲು, ತುಪ್ಪ, ಬೆಣ್ಣೆ, ಮೊಸರು ಇಂಥ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತ ಪ್ರಗತಿ ಕಾಣುವಂತ ದಿನ.

ಕಟಕ- ಸ್ವಲ್ಪ ಆರೋಗ್ಯದಲ್ಲಿ ತೊಳಲಾಟ. ಮಂಡಿನೋವು, ಸೊಂಟ ನೋವು ಕಾಡಲಿದೆ. ಹಣಕಾಸಿನ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗೃತ. ಮಹಾಲಕ್ಷ್ಮಿ ತಾಯಿಗೆ ಒಂದು ಸಣ್ಣ ಅರ್ಚನೆ ಮಾಡಿಸಿ ಶುಭವಾಗಲಿದೆ.

ಸಿಂಹ– ಪರವಾಗಿಲ್ಲ. ಮಕ್ಕಳಿಂದ ಅಭಿವೃದ್ಧಿ, ಮಕ್ಕಳಿಂದ ಖರ್ಚು ಹೆಚ್ಚಾಗಲಿದೆ. ಹಿರಿಯರ ವಿಚಾರದಲ್ಲಿ ಸ್ವಲ್ಪ ತಲ್ಲಣ ಉಂಟಾಗಲಿದೆ. ನಿಮ್ಮ ಕರ್ತವ್ಯವನ್ನು ಶುದ್ಧ ಮನಸ್ಸಿನಿಂದ ನಿರ್ವಹಿಸಿ ಬಹಳ ಒಳ್ಳೆಯದಾಗಲಿದೆ.

ಕನ್ಯಾ– ಇಂದು ನಿಮ್ಮ ದಿನ ಅದ್ಭುತವಾಗಿದೆ. ವಸ್ತ್ರ ಖರೀದಿ,ಸುತ್ತಾಟ,ಶಾಪಿಂಗ್ ಇವೆಲ್ಲವನ್ನು ನೋಡತಕ್ಕಂತ ಅದ್ಭುತವಾದ ದಿನ ನಿಮ್ಮದಾಗಲಿದೆ ಶುಭವಾಗಲಿ.

ತುಲಾ– ವ್ಯವಹಾರ, ವ್ಯಾಪಾರ, ಬ್ಯಾಂಕಿಂಗ್, ಬಡ್ಡಿ, ಆಟೊಮೊಬೈಲ್,ಟೆಕ್ನಿಕಲ್ ಲೈನ್, ಕಲಾವಿದರು ಇಂಥ ಹುದ್ದೆಯಲ್ಲಿ ಇರುವವರಿಗೆ ಒಂದು ರೀತಿಯ ಪ್ರಗತಿ ಕಾಣುವಂಥ ದಿನ ಚೆನ್ನಾಗಿದೆ.

ವೃಶ್ಚಿಕ– ಗಂಡ-ಹೆಂಡತಿಯ ಮಧ್ಯೆ ಸ್ವಲ್ಪ ಜಗಳ ಮನಸ್ತಾಪ ಉಂಟಾಗಲಿದೆ. ಒಡಹುಟ್ಟಿದವರು, ಮನೆಯವರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಲಿದೆ ಅವರ ಬಗ್ಗೆ ಹೆಚ್ಚು ಗಮನ ನೀಡಿ ಒಳ್ಳೆಯದಾಗಲಿದೆ.

ಧನಸ್ಸು– ಇಂದು ಯಾವುದೋ ಒಂದು ದುಡ್ಡು, ಯಾವುದೋ ಖುಷಿ, ಸರ್ಪ್ರೈಸ್, ಉದ್ಯೋಗ ನಿಮಿತ್ತ, ಕುಟುಂಬ ನಿಮಿತ್ತ ಸಂತಸವನ್ನು ನೋಡುತ್ತೀರಿ ಅಥವಾ ಕೇಳುತ್ತೀರಿ ಶುಭವಾಗಲಿದೆ.

ಮಕರ– ಉದ್ಯೋಗದಲ್ಲಿ ದೂರವಿದ್ದೀರಿ,ವ್ಯವಹಾರದಲ್ಲಿ ದೂರವಿರುವ ಒದ್ದಾಟದಲ್ಲಿ ಇರುವವರಿಗೆ ಶುಭ ಸುದ್ದಿ ಕೇಳತಕ್ಕಂತ ದಿನ. ಹಣ್ಣು, ಮೇಕಪ್, ಬ್ಯೂಟಿ ಪಾರ್ಲರ್, ಡ್ಯಾನ್ಸ್ ಕ್ಲಾಸ್, ಥಿಯೇಟರ್, ಟೈಲರ್ ಇಂಥ ರಂಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನುಕೂಲ ನೋಡುವಂಥ ದಿನ ಶುಭವಾಗಲಿದೆ.

ಕುಂಭ- ಬೇವು-ಬೆಲ್ಲ, ಸಂಗಾತಿ ವಿಚಾರ, ಮನೆಯವರ ವಿಚಾರದಿಂದ ಒತ್ತಡ. ಹಣಕಾಸಿನ ಮುಗ್ಗಟ್ಟು ಕಾಣಿಸಿದರೂ ದಿನದ ಅಂತ್ಯಕ್ಕೆ ಶುಭ ಸುದ್ದಿಯೊಂದನ್ನು ಕೇಳೇ ಕೇಳುತ್ತೀರಿ. ವ್ಯವಹಾರದಲ್ಲಿ ಉತ್ತಮ ಲಾಭವನ್ನು ನೋಡುತ್ತೀರಿ
ಶುಭವಾಗಲಿದೆ.

ಮೀನ– ಅತ್ತೆ- ಸೊಸೆ, ಅತ್ತಿಗೆ-ನಾದಿನಿ, ಸ್ತ್ರೀ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸ್ವಲ್ಪ ಕಿರಿಕಿರಿ ಉಂಟಾಗಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಾಧ್ಯತೆ ಹೆಚ್ಚಿದೆ ಜಾಗೃತ. ತುಂಬಾ ಗಾಬರಿ ಪಡಬೇಡಿ ಎಲ್ಲ ಒಳ್ಳೆಯದಾಗಲ್ಲಿದೆ.

LEAVE A REPLY

Please enter your comment!
Please enter your name here