ದಿನ ಭವಿಷ್ಯ ಆಗಸ್ಟ್ ೧೧ ೨೦೧೯

0
242

ಮೇಷ– ಕಲಾವಿದರು, ಟೆಕ್ನಿಕಲ್ ಲೈನ್, ಸರ್ವಿಸಿಂಗ್, ಎಂಜಿನಿಯರಿಂಗ್, ಇಂಡಸ್ಟ್ರೀ, ಇಂಥ ಹುದ್ದೆಯಲ್ಲಿರುವವರು ಅದ್ಭುತ ಪ್ರಗತಿ ನೋಡುವಂಥ ದಿನ ಚೆನ್ನಾಗಿದೆ. ನಿಮ್ಮ ಕೆಲಸಗಳನ್ನು ನಿಭಾಯಿಸುತ್ತೀರಿ, ರೈತರು, ಕೃಷಿಕರು ಒಳ್ಳೆಯ ಲಾಭವನ್ನು ನೋಡುತ್ತೀರಿ ಶುಭವಾಗಲಿದೆ.

ವೃಷಭ– ಒಡಹುಟ್ಟಿದವರು, ಕುಟುಂಬ, ವ್ಯವಹಾರ, ಸಣ್ಣ ಪುಟ್ಟ ಲೇವಾದೇವಿ ಕೆಲಸ ಮಾಡುತ್ತಿರುವವರಿಗೆ ಪರಿಶ್ರಮಕ್ಕೆ ತಕ್ಕಂತೆ ಫಲ ಸಿಗಲಿದೆ ಶುಭವಾಗಲಿ.

ಮಿಥುನ– ಇಂದು ನಿಮ್ಮ ದಿನ ಚೆನ್ನಾಗಿದೆ. ಖುಷಿಗೋಸ್ಕರ, ಆನಂದಕ್ಕೋಸ್ಕರ ಹೆಚ್ಚು ಖರ್ಚು ಮಾಡುತ್ತೀರಿ. ಯಾವುದೋ ಒಂದು ಕೆಲಸದ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳುತ್ತೀರಿ, ಅದರಲ್ಲಿ ಯಶಸ್ಸನ್ನು ನೋಡುತ್ತೀರಿ ಶುಭವಾಗಲಿದೆ.

ಕಟಕ– ಇವತ್ತು ಸ್ವಲ್ಪ ಗಲಿಬಿಲಿಯ ದಿನವೇ. ತಪ್ಪು ಹೆಜ್ಜೆ ಇಟ್ಟು ಮೋಸ ಹೋಗುತ್ತೀರಿ. ನಿಮ್ಮ ವ್ಯವಹಾರದಲ್ಲಿ ಭಾರಿ ಎಚ್ಚರ ವಹಿಸಿ ಕೆಲಸವನ್ನು ನಿರ್ವಹಿಸಿ, ಇವತ್ತು ಮೋಸ ಹೋಗುವ ಘಟನೆಗಳು ಹೆಚ್ಚು ಜಾಗೃತ.

ಸಿಂಹ– ಮಕ್ಕಳ ವಿಚಾರದಲ್ಲಿ ಸ್ವಲ್ಪ ವೈರಾಗ್ಯ ಮೂಡಲಿದೆ. ತುಂಬಾ ಆಸೆಗಳಲ್ಲಿ ಬದುಕಬಾರದು. ಮಕ್ಕಳ ಬಗ್ಗೆ ಹೆಚ್ಚು ಯೋಚನೆ ಬೇಡ ಏನು ಆಗಬೇಕು ಅದು ಆಗಲೇಬೇಕು, ನಾಳಿನ ಚಿಂತೆ ಬಿಡಿ ಶುಭವಾಗಲಿದೆ.

ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ದಿನದ ಅಂತ್ಯಕ್ಕೆ ಖುಷಿ, ಸಂಭ್ರಮ, ಓಡಾಟ, ಊಟ, ಉಪಚಾರ, ಅತಿಥಿಗಳ ಆಗಮನ ಇವೆಲ್ಲವನ್ನು ನೋಡುವಂಥ ದಿನ ಚೆನ್ನಾಗಿದೆ.

ತುಲಾ– ಸ್ವಲ್ಪ ವಾರಾಂತ್ಯದ ಯೋಚನೆಯಲ್ಲಿದ್ದೀರಾ, ಯಾವ ರೀತಿಯ ತೊಂದರೆಯೂ ಇಲ್ಲ.! ಆದರೆ ಇಂದು ಬೆಳಗ್ಗೆ ತಿಂಡಿಯನ್ನು ತಿನ್ನುವ ಮುನ್ನ ಒಂದು ಭೋಗಸೆಯಷ್ಟು ಆಹಾರವನ್ನು ಪಶು,ಪಕ್ಷಿಗಳಿಗೆ ಕೊಟ್ಟು ನಂತರ ತಿನ್ನುವುದು ಬಹಳ ಒಳ್ಳೆಯದು ಶುಭವಾಗಲಿ.

ವೃಶ್ಚಿಕ– ಇಂದು ನಿಮ್ಮ ದಿನ ಚೆನ್ನಾಗಿದೆ.ಆತ್ಮೀಯರೊಡನೆ ಸುತ್ತಾಟ,ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಗಾಬರಿ ಪಡಬೇಡಿ ಯಾವ ತೊಂದರೆಯೂ ಇಲ್ಲ ಶುಭವಾಗಲಿದೆ.

ಧನಸ್ಸು– ಇಂದು ಅವಮಾನ, ಅಪಮಾನ ಉಂಟಾಗಲಿದೆ. ಆದಷ್ಟು ಇನ್ನೊಬ್ಬರಿಂದ ಹೆಚ್ಚು ಉಪದೇಶಗಳನ್ನು ಕೇಳುತ್ತೀರಿ. ಮನಸ್ಸಿಗೆ ಏನೋ ತಳಮಳ ಕಾಡಲಿದೆ.

ಮಕರ-ಇಂದು ಸ್ವಲ್ಪ ಆರೋಗ್ಯದಲ್ಲಿ ತೊಂದರೆ, ಹಣಕಾಸಿನ ವಿಚಾರದಲ್ಲಿ ತೊಂದರೆ ಕಾಡಲಿದೆ. ಕುಟುಂಬದವರಿಂದ ನಿಮ್ಮ ಕೆಲಸಕ್ಕೆ ಒಂದು ಒಳ್ಳೆ ಸಹಕಾರ ಸಿಗಲಿದೆ ಹೆದರಬೇಡಿ ಶುಭವಾಗಲಿದೆ.

ಕುಂಭ-ನಿಮ್ಮ ದಿನದ ಆರಂಭ ಸ್ವಲ್ಪ ಟೆನ್ಷನ್ನಿಂದ ಆರಂಭವಾಗಲಿದೆ. ಯೋಗ, ಧ್ಯಾನ, ಮಂತ್ರ ಜಪಗಳನ್ನು ಮಾಡುವುದು ಒಳ್ಳೆಯದು. ಒಳ್ಳೆ ಕೆಲಸದ ಬಗ್ಗೆ ಯೋಚನೆ ಮಾಡುತ್ತಿದ್ದೀರಿ, ಖಂಡಿತ ಶುಭ ಸುದ್ದಿ ಕೇಳುತ್ತೀರಿ ಒಳ್ಳೆಯದಾಗಲಿದೆ.

ಮೀನ– ಬಹು ವಿಶೇಷವಾಗಿವಾಗಿರುವಂತ ದಿನ. ದೂರ ಸ್ಥಳದಿಂದ ಒಂದು ಶುಭ ಸುದ್ದಿ, ಇಂದು ಯಾರೋ ಸ್ತ್ರೀ ಮೂಲಕ ಒಂದು ಶುಭ ಸುದ್ದಿ ಕೇಳುತ್ತೀರಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here