ದಿನ ಭವಿಷ್ಯ ಆಗಸ್ಟ್ ೧೦ ೨೦೧೯

0
236

ಮೇಷ– ಕಷ್ಟಪಟ್ಟು ಮೇಲೆ ಬರಬೇಕು, ಶಾರ್ಟ್ ಕಟ್ ಹಾದಿಯನ್ನು ಹುಡುಕಬೇಡಿ. ಆದರೆ ಇಂದು ವೆಂಕಟೇಶ್ವರನ ಸನ್ನಿಧಿಗೆ ಭೇಟಿ ನೀಡಿ, ದೀಪಕ್ಕೆ ಎಣ್ಣೆಯನ್ನು ಅರ್ಪಿಸಿ ಶುಭವಾಗಲಿದೆ.

ವೃಷಭ– ಪರವಾಗಿಲ್ಲ. ಲಿಕ್ಕರ್, ಆಯಿಲ್ ಇದಕ್ಕೆ ಸಂಬಂಧಪಟ್ಟಂತ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದೀರ. ತೆರಿಗೆ ಇಲಾಖೆ ಕೆಲಸ ಮಾಡುತ್ತಿದ್ದೀರಾ.! ಹಣಕಾಸಿನಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ ಶುಭವಾಗಲಿದೆ.

ಮಿಥುನ– ದುಡುಕಿ ಇಂದು ಏನಾದರೂ ಎಡವಟ್ಟು ಮಾಡಿಕೊಳ್ಳುತ್ತೀರಿ. ಯಾರೊಂದಿಗೂ ಜಗಳ, ಮನಸ್ತಾಪ ಉಂಟಾಗಲಿದೆ ಜಾಗೃತ. ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನವಿರಲಿ ಶುಭವಾಗಲಿದೆ.

ಕಟಕ– ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ಅಕ್ಕನ ಮಕ್ಕಳು, ತಂಗಿಯ ಮಕ್ಕಳು, ತಮ್ಮನ ಮಕ್ಕಳು ,ಮಾವನ ಮಕ್ಕಳು, ಅಣ್ಣನ ಮಕ್ಕಳು ಇಂಥ ಮಕ್ಕಳಿಂದ ಇಂದು ಏನೋ ತುಂಟತನ, ಕಿರಿಕಿರಿ ಉಂಟಾಗಲಿದೆ ಬೇಸರ ಮಾಡಿಕೊಳ್ಳಬೇಡಿ ಶುಭವಾಗಲಿ.

ಸಿಂಹ– ಪರವಾಗಿಲ್ಲ ವಿದ್ಯಾರ್ಥಿಗಳು ಸ್ವಲ್ಪ ಓದಿನ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಇಂದು ಹಯಗ್ರೀವ ಉಪಾಸನ ಮಾಡಿಕೊಳ್ಳುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಶುಭವಾಗಲಿ.

ಕನ್ಯಾ– ಬುದ್ಧಿ ಉಪಯೋಗಿಸಿ ಮಾಡಬಹುದಾದಂಥ ಕೆಲಸಗಳಲ್ಲಿ ಅದ್ಭುತ ಪ್ರಗತಿ ನೋಡುತ್ತೀರಿ. ಕಲಾವಿದರು,ಆರ್ಟಿಸ್ಟ್ , ಮಾತಿಗೆ ಸಂಬಂಧಪಟ್ಟಂಥ ಕೆಲಸಗಳು ಇಂಥ ಹುದ್ದೆಯಲ್ಲಿ ಇರುವವರು ಅದ್ಭುತ ಪ್ರಗತಿ ನೋಡುತ್ತೀರಿ ಚೆನ್ನಾಗಿದೆ.

ತುಲಾ– ತುಂಬಾ ದೊಡ್ಡ ಕೆಲಸ ಅಥವಾ ಚಿಕ್ಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದೀರಿ.
ಮಧ್ಯಂತರ ಕೆಲಸದಲ್ಲಿ ನೀವು ತೊಡಗಿಸಿಕೊಂಡಿಲ್ಲ. ಇಂಥ ಹುದ್ದೆಯಲ್ಲಿ ಇರುವವರಿಗೆ ಅದ್ಭುತ ಪ್ರಗತಿ ಶುಭವಾಗಲಿದೆ.

ವೃಶ್ಚಿಕ– ಇಂದು ಮನಸ್ಸಿಗೆ ಸ್ವಲ್ಪ ಗಡಿಬಿಡಿ, ಏನೋ ತಳಮಳ ಉಂಟಾಗಲಿದೆ. ಉದ್ಯೋಗ, ವ್ಯವಹಾರದಲ್ಲಿ ಸ್ವಲ್ಪ ತೊಡಕು ಉಂಟಾಗಲಿದೆ. ಯಾವುದೋ ಹಣಕಾಸು ನಿಮ್ಮ ಕೈಗೆ ಸೇರಬೇಕು ಆದರೆ ಇನ್ನೂ ಸೇರಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆ.ಆದಷ್ಟು ಇಂದು ಓಂ ನಮಃ ವೆಂಕಟೇಶಾಯ ನಮಃ ಎಂದು ಜಪ ಮಾಡಿ ಒಳ್ಳೆಯದಾಗಲಿದೆ.

ಧನಸ್ಸು– ಇಂದು ನೀವು ಬಹಳ ಚುರುಕಾಗಿ ಇರುತ್ತೀರಿ.ನಿಮ್ಮ ಕೆಲಸದ ಬಗ್ಗೆ ಇಂದು ಹಲವು ದೃಢ ನಿರ್ಧಾರಗಳನ್ನು ಬಹಳ ಬೇಗ ತೆಗೆದುಕೊಳ್ಳುತ್ತೀರಿ! ವೇಗವಾಗಿ ಕೆಲಸ ಮಾಡುವಷ್ಟು ಚುರುಕಾಗಿದ್ದೀರ ಒಳ್ಳೆಯದು. ಅತಿ ವೇಗ ಕೂಡ ಒಳ್ಳೆಯದಲ್ಲ, ಆದಷ್ಟು ಹನುಮನಿಗೆ ಒಂದು ಆರಾಧನೆ ಮಾಡಿ ಒಳ್ಳೆಯದಾಗಲಿದೆ.

ಮಕರ-ಇಂದು ನೀವು ತುಂಬಾ ನಯ, ನಾಜೂಕು, ಬಹಳ ಸ್ವಚ್ಛವಾಗಿರುವ ಯೋಚನೆ ಮಾಡುತ್ತೀರಿ.! ಆದರೆ ಅದು ಯಾವ ರೀತಿಯ ಪ್ರಯೋಜನವೂ ನಿಮಗೆ ನೀಡುವುದಿಲ್ಲ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಶುಭವಾಗಲಿ.

ಕುಂಭ– ಬರವಣಿಗೆಗಾರರು, ಲೇಖಕರು, ಪ್ರೊಫೆಸರ್, ಡಾಕ್ಟರ್ಸ್ ಇಂಥ ಉದ್ಯೋಗದಲ್ಲಿ ಇರುವವರಿಗೆ ಇಂದು ಅದ್ಭುತ ಪ್ರಗತಿ ಕಾಣುವಂತ ದಿನ.

ಮೀನ– ಟೆಕ್ನಿಕಲ್ ಲೈನ್ಸ್, ರಿಪೇರಿ, ಸರ್ವಿಸಿಂಗ್, ಮೆಕ್ಯಾನಿಕಲ್, ಟೆಕ್ನಿಕಲ್, ಸರ್ವಿಸ್ ಮಾಡುವ ಹುದ್ದೆಯಲ್ಲಿ ಇರುವವರು ಅನುಕೂಲ ನೋಡುವಂಥ ದಿನ ಚೆನ್ನಾಗಿದೆ. ಇಂದು ಸ್ವಲ್ಪ ಕಿವಿ ನೋವಿನಿಂದ ಬಳಲುವ ಸಾಧ್ಯತೆ ಹೆಚ್ಚಿದೆ ಜಾಗೃತ.

LEAVE A REPLY

Please enter your comment!
Please enter your name here