ದಸರಾ ಹತ್ತು ದಿನಗಳ ಜನತಾದರ್ಶನದಂತೆ ನಡೆಯೋ ಸಾಂಸ್ಕøತಿಕ ಉತ್ಸವ

0
216

ಚರಿತ್ರೆಯ ಪುಟಗಳಲ್ಲಿ ಕನ್ನಡನಾಡು ಹಲವಾರು ವಿಶೇಷತೆಗಳಿಂದ ಕೂಡಿದ ರಾಜ್ಯ. ಇಲ್ಲಿನ ಸಂಸ್ಕøತಿ ಜನರನ್ನು ಒಟ್ಟುಗೂಡಿಸುವುದೇ ಅಗಿತ್ತು. ಇದಕ್ಕೆ ಹಬ್ಬಗಳು, ಜಾತ್ರೆಗಳು ಮತ್ತು ಮಹಾ ಉತ್ಸವಗಳೇ ನಡೆಯುತ್ತಿತ್ತು. ಅಂತಹುದೇ ಹಲವು ಅಚ್ಚರಿಗಳ ಉತ್ಸವ ಪ್ರತಿವರ್ಷ 10 ದಿನಗಳು ನಡೆಯುತ್ತದೆ ಇದು ಇಂದಿಗೂ ಮುಂದುವರೆದಿದೆ ಎಂಬುದೇ ಹೆಗ್ಗಳಿಕೆ.

ಮೈಸೂರು ರಾಜ್ಯದ ಕಲ್ಪನೆಯನ್ನು ರೂಪಸಿದವರು ರಾಜ ಒಡೆಯರ್. ಶ್ರೀರಂಗಪಟ್ಟಣ ಸ್ವಾಧೀನದ ಬಳಿಕ ರಾಜಧಾನಿ ಮಾಡಿಕೊಂಡು ಆಡಳಿತ ನಡೆಸಿದವರೂ ಇವರೇ. ವಿಜಯನಗರದಲ್ಲಿ ನಡೆಯುತ್ತಿದ್ದ ನವರಾತ್ರಿಯನ್ನು ಶ್ರೀರಂಗಪಟ್ಟಣಕ್ಕೆ ತಂದವರೂ ರಾಜ ಒಡೆಯರ್. ಇವರ ನೇತೃತ್ವದಲ್ಲಿ ದಸರಾ ಉತ್ಸವಕ್ಕೆ ನಾಂದಿ, 1610ರಲ್ಲಿ ಆರಂಭವಾದ ದಸರಾ ಇಂದಿಗೂ ಅದೇ ನಿಯಮದಲ್ಲೇ ನಡೆಯುತ್ತಿದೆ. ಅದಕ್ಕೆ ಕಾರಣವೂ ಇದೆ.

ದಸರಾ ಮಹೋತ್ಸವ ಪರಂಪರೆ, ಮೂಲ ಚೌಕಟ್ಟು. ಅವತ್ತಿನ ದಸರಾವೇ ಮಾದರಿ, ಇದಕ್ಕೆ ಕಾರಣವಾಗಿದ್ದು ರಾಜ ಒಡೆಯರ್ ಮಾಡಿದ ಕಟ್ಟಪ್ಪಣೆ. ಅದೊಂದು ಧಾರ್ಮಿಕ ಕಟ್ಟಳೆ. ಅರಮನೆಯಲ್ಲಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಟ್ಟಿಕೊಂಡ ಕಂಕಣ. ನಿಜವಾದ ಅರ್ಥದಲ್ಲಿ ರಾಜನ ವಾರ್ಷಿಕವರದಿ. ಜನ ಸಂಗಮ. ರಾಜ ಪ್ರಜೆಗಳ ಮುಖಾಮುಖಿ.

ಸಾಂಸ್ಕøತಿಕ ಸಾಮಾಜಿಕ ಚಟುವಟಿಕೆಯ ಸಾಲು, ಭಕ್ತಿ, ಸೂಕ್ತಿ ಹಾಗೂ ಆಡಳಿತ ನೋಟ-ಮುನ್ನೋಟ. ಆಶ್ವಯುಜ ಪ್ರಥಮದಿನ ಪ್ರಾತಃಕಾಲ ಮಂಗಳ ಸ್ನಾನ. ಯಜ್ಞೊ ಪವೀತ ಧಾರಣೆ. ದ್ವೀಪನಗರಿ ಶ್ರೀರಂಗಪಟ್ಟಣದ ಉತ್ತರ ದಿಕ್ಕಿನ ಗೌರಿ ಕಡುವೆಯಲ್ಲಿ ಕಾಲಾಳು, ಒಂಟೆ, ಆನೆ ಕುದುರೆ ಕಲರವ. ಶುಭ್ರ ವಸ್ತ್ರ ಅಲಂಕೃತ ವೇಷ-ಭೂಷ. ಸಿಂಹಾಸನಕ್ಕೆ ಮೊದಲ ನಮಸ್ಕಾರ, ಅದಕ್ಕೂ ಮುನ್ನ ಕಾಳಿಕಾ ಪುರಾಣೋಕ್ತಿ ಪಠಣ. ದೇವಾನು ದೇವತೆಗಳ ಪೂಜೆ ಮತ್ತು ಒಳ್ಳೆಯ ಮುಹೂರ್ತದಲ್ಲಿ ಸಿಂಹಾಸನ ಆರೋಹಣ.

ಶೌರ್ಯ ಪರಾಕ್ರಮದಿಂದ ಗಳಿಸಿದ ಹನುಮಧ್ವಜಕ್ಕೆ ವಂದನೆ. ಚೌರಿ, ಮಕರಡಕ್ಕೆ, ಭೇರಿ, ಬಿರುದು-ಲಾಂಛನಗಳ ಪ್ರದರ್ಶನ. ರಾಗ ತಾಳ ವಾದ್ಯ ಗೀತ ಸಂಗೀತ ನೃತ್ಯ ಹಬ್ಬವೂ ಇದಾಗಿದೆ. ವೀಣೆ, ವೇಣು ವಾದನ. ಅರಮನೆಯೇ ಬೆಳಗಿದ ಮೇಲೆ ಕೆಮ್ಮಣ್ಣುಮಟ್ಟಿಯಲ್ಲಿ ಕುಸ್ತಿ, ಮುಷ್ಟಿ ಕಾಳಗದವರ ಪ್ರತಾಪ. ರಾಜ ಸಿಂಹಾಸನದಲ್ಲಿ ಆಸೀನ. ಅರಸು ಜನರು, ಪಾಳೆಯಗಾರರು, ಅಧಿಕಾರಿಗಳು, ಗಣ್ಯರಿಂದ ಉಡುಗೊರೆ.

ಸಿಂಹಾಸನದಲ್ಲಿ ಕುಳಿತ ರಾಜರಿಗೆ, ರಾಜಗುರುಗಳಿಂದ ಮಂತ್ರಾಕ್ಷತೆ, ಟಗರು, ಕೋಣ, ಡೊಂಬರು, ಪೈಲ್ವಾನರ ಆಟಗಳ ಪ್ರದರ್ಶನ. ಸಿಂಹಾಸನದಿಂದ ಇಳಿದ ರಾಜರಿಂದ ತಾಯಿಗೆ ನಮಸ್ಕಾರ. ನಂತರವೇ ಫಲಾಹಾರ. ಇದಿಷ್ಟೂ ದಸರಾ ಮಹೋತ್ಸವದ ಪ್ರನಿತ್ಯವೂ ನಡೆಯುವ ಕ್ರಮಗಳು. ನಕ್ಷತ್ರ ಬಾಣ, ಬಿರುಸುಗಳ ನಡುವೆ ವೀರಭದ್ರನ ಹಲಗೆ ಹೊತ್ತವರ ಹೆಜ್ಜೆಗೆಜ್ಜೆ ನೋಟ.

LEAVE A REPLY

Please enter your comment!
Please enter your name here