ಭಾರತೀಯ ಚಿತ್ರರಂಗದಲ್ಲಿ ಅನೇಕ ಸುಂದರ ನಟಿಯರು ತೆರೆಯ ಮೇಲೆ ಮಿಂಚಿದ್ದಾರೆ . ಬಾಲಿವುಡ್, ಟಾಲಿವುಡ್ ಗಳಲ್ಲಿ ಮಿಂಚಿರುವ ಕಿಯಾರಾ ಅಡ್ವಾಣಿ ಬೇಡಿಕೆಯ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ನಡೆದ 2019 ರ ಇಂಡಿಯಾ ಕೋಚ್ ವೀಕ್ , ಉದ್ಘಾಟನೆಯಲ್ಲಿ ಕಿಯಾರ ರಾಂಪ್ ವಾಕ್ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.
ಯುವಕರ ಹಾಟ್ ಫೇವರೆಟ್ ನಟಿ, ಕೆಂಪುಬಣ್ಣದ
ಬ್ರೈಡಲ್ ಲೆಹೆಂಗಾ ಧರಿಸಿ ನೋಡುಗರ ಕಣ್ಣಲ್ಲಿ ಸರಿಯಾದರು. ಹಿಂದಿಯ ಕಬೀರ್ ಸಿಂಗ್ ಚಿತ್ರವು ಬಾಲಿವುಡ್ ಅಂಗಳದಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದು ಯಶಸ್ಸಿನ ಶಿಖರ ಏರಿದ ಬೆನ್ನಲ್ಲೇ ತಮ್ಮ ನೆಚ್ಚಿನ ತಾರೆಯ ಮುಂಬರುವ ಚಿತ್ರಗಳಿಗಾಗಿ ಅಭಿಮಾನಿಗಳಲ್ಲಿ ಕಾತರವನ್ನು ಮೂಡಿಸಿದೆ.
ಕಿಯಾರ ಅಡ್ವಾಣಿಯವರು ಸಮಾಜಮುಖಿ ಚಿತ್ರಗಳಲ್ಲಿ ಹೆಚ್ಚು ಅಭಿನಯಿಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.