ಆಧುನಿಕ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಈಗ ತಾನೇ ಹುಟ್ಟಿದ ಮಗುವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ನಾವು ಬಳಸುತ್ತಿರುವ ಆಹಾರದಲ್ಲಿ ಪೋಷಕಾಂಶ ಕಡಿಮೆ, ಕೆಮಿಕಲ್ ಹೆಚ್ಚು. ಅದರಿಂದ ಆಹಾರ ವಿಷದ ರೂಪ ತಾಳಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿದೆ. ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಸಲು ಇಲ್ಲಿದೆ ನೋಡಿ ಸುಲಭ ಪರಿಹಾರ.
• *ನೀರು ಕುಡಿದರೆ ಈ ರೀತಿಯ ಗ್ಯಾಸ್ ಸಮಸ್ಯೆ ನಿವಾರಣೆಯಗುವುದು. ನೀರು ಕುಡಿದಾಗ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್ ಮೂತ್ರದ ಮುಖಾಂತರ ಹೊರಹೋಗುವುದು.
• *ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ನೀರು ತಣ್ಣಗಾದ ಮೇಲೆ ಕುಡಿದರೆ ಗ್ಯಾಸ್ ಸಮಸ್ಯೆ ಕಡಿಮೆಯಾಗುವುದು. * ಟೀಗೆ ಶುಂಠಿ ಹಾಕಿ ಕುಡಿದರೂ ಈ ಸಮಸ್ಯೆ ಪರಿಹಾರವಾಗುವುದು.
• ಪಲಾವ್ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಆ ನೀರನ್ನು ಕುಡಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.
• *ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಸೋಂಪು ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಊಟದ ಮುಂಚೆ ಮತ್ತು ನಂತರ ಸೋಂಪು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.
• 1/4 ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು