ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನೆಲ್ಲಾ ಪ್ರಯೋಜನವಾಗುತ್ತದೆ ತಿಳಿದಿದೆಯಾ.??

0
263

ಮನುಷ್ಯನ ದೇಹವು ಶೇ. 75ರಷ್ಟು ನೀರಿನಿಂದ ಕೂಡಿದೆ. ದ್ರವ
ಅಂಶವು ಪ್ರಮುಖ ಪಾತ್ರವಹಿಸುತ್ತದೆ. ಇದೇ ಕಾರಣಕ್ಕಾಗಿ ಮನುಷ್ಯನಿಗೆ ನೀರಿನ ಅತ್ಯಗತ್ಯವಾಗಿದೆ. ನೀರು
ದೇಹದಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಮಾತ್ರವಲ್ಲದೇ, ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಂದಲೂ
ಇದು ಕಾಪಾಡುವುದು. ಹೀಗಾಗಿ ನಾವು ಪ್ರತಿನಿತ್ಯ ಅಗತ್ಯಕ್ಕೆ ಅನುಗುಣವಾಗಿ ನೀರಿನ ಸೇವನೆ ಮಾಡಲೇಬೇಕಾಗುತ್ತದೆ.

ಒಂದು ಮಿತಿಯ ನೀರಿನ ಸೇವನೆ ಮಾಡದೇ ಇದ್ದರೆ, ಆಗ ದೇಹವು ನಿರ್ಜಲೀಕರಣಕ್ಕೆ
ಒಳಗಾಗುವುದು. ಹೀಗಾಗಿ ನಮ್ಮ ದೇಹಕ್ಕೆ ನೀರು ಎನ್ನುವುದು ಅತೀ ಅಗತ್ಯ. ನೀರನ್ನು ಸಾಮಾನ್ಯ ನೀರು,
ತಣ್ಣಗಿನ ನೀರು ಮತ್ತು ಬಿಸಿ ನೀರು ಎಂದು ಮೂರು ವಿಧವಾಗಿ ವಿಂಗಡಿಸಬಹುದು. ಹೆಚ್ಚಾಗಿ ಬೇಸಿಗೆಯಲ್ಲಿ
ಸಾಮಾನ್ಯ ಅಥವಾ ತಣ್ಣಗಿನ ನೀರು ಕುಡಿಯಲು ಇಷ್ಟಪಡುವರು. ಇನ್ನು ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿ
ನೀರು ಇಷ್ಟವಾಗುವುದು.

ಮುಂಜಾನೆ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ
ಸಾಕಷ್ಟು ಲಾಭಗಳು ಸಿಗುತ್ತದೆ ಎಂಬುದು ನಮಗೆ ತಿಳಿದೇ ಇದೆ. ಆದರೆ ಯಾವೆಲ್ಲಾ ಅನುಕೂಲಗಳಾಗುತ್ತದೆ
ಎಂಬುದನ್ನು ಇಲ್ಲಿ ತಿಳಿಯೋಣ.

 1. ಜೀರ್ಣಕ್ರಿಯೆ
  ಸುಧಾರಿಸುವುದು:
  ಬಿಸಿನೀರು ಕುಡಿಯುವುದರಿಂದ ಸಿಗುವಂತಹ ಅತೀ ಮುಖ್ಯ
  ಲಾಭ ಎಂದರೆ ಜೀರ್ಣ ಕ್ರಿಯೆ ಸುಧಾರಣೆ ಮಾಡುವುದು. ಬಿಸಿನೀರು ನಾವು ಸೇವಿಸಿದ ಆಹಾರವನ್ನು ವಿಘಟಿಸಲು
  ನೆರವಾಗುವುದು ಮಾತ್ರವಲ್ಲದೇ, ಇದರಿಂದ ಜೀರ್ಣಕ್ರಿಯೆ ಕೂಡ ಸರಾಗವಾಗಿ ಆಗುವುದು. ಮಲಬದ್ಧತೆ ನಿವಾರಣೆ
  ಮಾಡುವುದಲ್ಲದೇ, ಕರುಳಿನ ಕ್ರಿಯೆಯನ್ನು ಸರಾಗಗೊಳಿಸುತ್ತದೆ.  
 2. ತೂಕ
  ಇಳಿಸಲು ಸಹಕಾರಿ:
  ಬಿಸಿ ನೀರು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು
  ನೆರವಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳುತ್ತವೆ. ಬಿಸಿನೀರು ದೇಹದಲ್ಲಿರುವ ವಿಷಕಾರಿ ಅಂಶವನ್ನು
  ಪರಿಣಾಮಕಾರಿಯಾಗಿ ಹೊರಗೆ ಹಾಕುವುದು. ಅಲ್ಲದೇ, ಹೊಟ್ಟೆ ತುಂಬಿದಂತೆ ಮಾಡುವುದು. ದೇಹದಲ್ಲಿರುವ ವಿಷಕಾರಿ
  ಅಂಶವನ್ನು ಪರಿಣಾಮಕಾರಿಯಾಗಿ ಹೊರಗೆ ಹಾಕುವುದು. ಇದು ಹೊಟ್ಟೆ ತುಂಬಿದಂತೆ ಮಾಡುವುದು. ತಣ್ಣೀರಿಗೆ
  ಹೋಲಿಕೆ ಮಾಡಿದರೆ, ಬಿಸಿನೀರು ಹೆಚ್ಚು ಕಾಲ ಹೊಟ್ಟೆಯಲ್ಲಿ ಉಳಿಯುತ್ತದೆ.
 3. ಕಟ್ಟಿದ
  ಮೂಗು ನಿವಾರಣೆ:
  ಬಿಸಿನೀರನ್ನು ಕುಡಿಯುವುದರಿಂದ ಸಿಗುವ ಮತ್ತೊಂದು ಲಾಭ
  ಎಂದರೆ ಅದು ಕಟ್ಟಿದ ಮೂಗಿನ ತೊಂದರೆಯನ್ನು ನಿವಾರಣೆ ಮಾಡುತ್ತದೆ. ಮುಚ್ಚಿ ಹೋಗಿರುವಂತಹ ಸೈನಸ್‍ ಅನ್ನು
  ಬಿಡಿಸುವುದು, ಶೀತದ ವಿರುದ್ಧ ಹೋರಾಡಲು ಇದು ತುಂಬಾ ಪರಿಣಾಮಕಾರಿಯಾಗಿ ನೆರವಾಗುವುದು. ಬಿಸಿನೀರನ್ನು
  ಕುಡಿದರೆ, ನಿಮಗೆ ಸೈನಸ್‍ ನಿಂದ ಬರುತ್ತಿರುವ ತಲೆನೋವಿನ ನಿವಾರಣೆ ಮಾಡಲು ನೆರವು ಸಿಗುವುದು.
 4. ರಕ್ತಸಂಚಾರವನ್ನು
  ಸುಧಾರಿಸುವುದು:
  ಕೇವಲ ಹೊಟ್ಟೆಯ ಆರೋಗ್ಯ ಮಾತ್ರವಲ್ಲದೇ, ಬಿಸಿ ನೀರಿನಿಂದಾಗಿ
  ದೇಹದಲ್ಲ ರಕ್ತ ಸಂಚಾರವು ಸುಗಮವಾಗಿ ಆಗಲು ನೆರವಾಗುತ್ತದೆ. ರಕ್ತನಾಳವನ್ನು ಹಿಗ್ಗಿಸುವ ಮೂಲಕ ರಕ್ತ
  ಸರಿಯಾಗಿ ಸಂಚಾರವಾಗುವಂತೆ ಮಾಡುತ್ತದೆ. ಇದರಿಂದ ಸಂಪೂರ್ಣ ದೇಹಕ್ಕೆ ರಕ್ತ ತಲುಪುತ್ತದೆ. ಇದರಿಂದಾಗಿ
  ಹೃದಯದ ಆರೋಗ್ಯ ಉತ್ತಮವಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ
  ವಹಿಸುತ್ತದೆ.
 5. ನೈಸರ್ಗಿಕ
  ನೋವು ನಿವಾರಣೆ ಮಾಡುವುದು:
  ಬಿಸಿನೀರು ರಕ್ತ ಸಂಚಾರವನ್ನು ಉತ್ತಮಪಡಿಸುವುದು.
  ಇದರಿಂದಾಗಿ ದೇಹದೆಲ್ಲೆಡೆ ಸಂಚಾರವಾಗಿ ಸ್ನಾಯುಗಳಿಗೆ ಆರಾಮ ಸಿಗುವುದು ಮತ್ತು ನೋವು ನಿವಾರಣೆ ಆಗುತ್ತದೆ.
  ರಕ್ತ ಸಂಚಾರವನ್ನು ಉತ್ತಮಪಡಿಸುವುದರಿಂದ ದೇಹದೆಲ್ಲೆಡೆ ಸಂಚಾರವಾಗ ಸ್ನಾಯುಗಳಿಗೆ ಆರಾಮ ಸಿಗುತ್ತದೆ
  ಮತ್ತು ನೋವು ನಿವಾರಣೆ ಮಾಡುತ್ತದೆ. ಅಲ್ಲದೇ, ದೇಹದ ನೋವಿಗೂ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.
 6. ಮಲಬದ್ಧತೆಯನ್ನು
  ತಡೆಯುತ್ತದೆ:
  ಮೈದಾ ಹಾಗೂ ಇತರ ಅನಾರೋಗ್ಯಕರ ಸಿದ್ಧ ಆಹಾರಗಳನ್ನು
  ಸೇವಿಸುವವರಿಗೆ ಮಲಬದ್ಧತೆ ನಿತ್ಯದ ತೊಂದರೆಯಾಗಿದೆ. ನಿತ್ಯವೂ ಬಿಸಿನೀರನ್ನು ಸೇವಿಸುವ ಮೂಲಕ ಕರುಳು
  ಹೆಚ್ಚು ಸಂಕುಚಿತಗೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತದೆ. ಆದ್ದರಿಂದ
  ಮಲಬದ್ಧತೆ ತೊಂದರೆ ಇರುವವರು ತಕ್ಷಣ ತಮ್ಮ ನೀರಿನ ಅಗತ್ಯತೆಯನ್ನು ಬಿಸಿನೀರಿಗೆ ಬದಲಿಸಿಕೊಳ್ಳುವ ಮೂಲಕ
  ಶೀಘ್ರವೇ ಈ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳಬಹುದು.
 7. ಮುಟ್ಟಿನ
  ವೇಳೆ ಉಂಟಾಗುವ ಸ್ನಾಯು ಸೆಳೆತವನ್ನು ನಿವಾರಣೆ:
  ಮುಟ್ಟಿನ
  ವೇಳೆ ಸ್ನಾಯು ಸೆಳೆತದ ಸಮಸ್ಯೆ ಎದುರಿಸುವವರು ಬಿಸಿನೀರನ್ನು ಕುಡಿದರೆ ಅದರಿಂದ ಪರಿಹಾರ ಪಡೆಯಬಹುದಾಗಿದೆ.
  ಇದು ಹೊಟ್ಟೆಯಲ್ಲಿನ ಸ್ನಾಯುಗಳ ಸೆಳೆತವನ್ನು ಕಡಿಮೆ ಮಾಡಿ, ರಕ್ತ ಪರಿಚಲನೆಯನ್ನು ಹೆಚ್ಚಿಸಿ ನೋವಿನಿಂದ
  ವಿರಾಮ ಸಿಗುವಂತೆ ಮಾಡುತ್ತದೆ.

LEAVE A REPLY

Please enter your comment!
Please enter your name here