ಕ್ಷದ್ರ ಗ್ರಹಗಳಿಂದ ಭೂಮಿ ಸದ್ಯಕ್ಕೆ ಸೇಫ್.

0
194

ಭೂಮಿಗೆ ಮೊದಲಿನಿಂದಲೂ ಗಂಡಾಂತರಗಳಿಗೆ ಎಂದು ಹಲವು ಉದಾಹರಣೆಗಳಿಂದ ಸಾಬೀತಾಗಿದೆ .ಕೆಲವು ಬಾರಿ ಪ್ರಳಯ ನಾಳೆ ಸಂಭವಿಸುತ್ತದೆ ಎಂದು ತಿಳಿದು ಪ್ರಳಯ ಆಗದೇ ಇರುವ ದಿನಗಳು ಕೂಡ ಇದೆ .ಖಗೋಳ ವಿಜ್ಞಾನಿಗಳನ್ನು ತಲ್ಲಣಗೊಳಿಸಿದ್ದ ಕ್ಷುದ್ರಗ್ರಹ 2019 OK ಭೂಕಕ್ಷೆಯಿಂದ ಅತ್ಯಂತ ಸುರಕ್ಷಿತವಾಗಿ ಹಾದು ಹೋಗಿದೆ. ಒಂದು ಸೆಕೆಂಡ್‌ಗೆ 24 ಕಿ.ಮೀ ವೇಗದಲ್ಲಿ ಭೂ ಕಕ್ಷೆಯಿಂದ ಸುಮಾರು 71,880 ಕಿ.ಮೀ ಅಂತರದಲ್ಲಿ ಕ್ಷುದ್ರಗ್ರಹ ಹಾದು ಹೋಗಿದೆ.

ಸುಮಾರು 57 ರಿಂದ 130 ಮೀಟರ್ ವಿಸ್ತೀರ್ಣತೆ ಹೊಂದಿದ್ದ 2019 OK ಕ್ಷುದ್ರಗ್ರಹ, ಇತ್ತಿಚಿನ ದಿನಗಳಲ್ಲಿ ಭೂಮಿಯ ಅತ್ಯಂತ ಸಮೀಪ ಹಾದು ಹೋದ ಕ್ಷುದ್ರಗ್ರಹ ಎಂದು ವರದಿಯಾಗಿದೆ.

ಒಂದು ವೇಳೆ ಈ ಕ್ಷದ್ರಗ್ರಹ ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕು ಭೂಮಿಗೆ ಬಂದು ಅಪ್ಪಳಿಸಿದ್ದರೆ, ಹಿರೋಶಿಮಾ ಮೇಲೆ ಹಾಕಲಾಗಿದ್ದ ಅಣುಬಾಂಬ್’ಗಿಂತ 30 ಪಟ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಿ ಭಾರೀ ವಿನಾಶಕ್ಕೆ ಕಾರಣವಾಗುತ್ತಿತ್ತು ಎಂದು ನಾಸಾ ತಿಳಿಸಿದೆ.ವರ್ಷದಲ್ಲಿ ಸರಿಸುಮಾರು 2,000ಕ್ಕೂ ಅಧಿಕ ಕ್ಷುದ್ರಗ್ರಹಗಳು ಭೂಮಿಯನ್ನು ಹಾದು ಹೋಗುತ್ತವೆ. ಅದರಲ್ಲಿ ಕೆಲವೊಂದು ಕ್ಷುದ್ರಗ್ರಹಗಳು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗುತ್ತವೆ.
ಇದು ನಾಸಾ ಸೇರಿದಂತೆ ಜಗತ್ತಿನ ಎಲ್ಲಾ ಖಗೋಳ ಸಂಸ್ಥೆಗಳು ವಿಜ್ಞಾನಿಗಳನ್ನು ಚಡಪಡಿಸುವಂತೆ ಮಾಡುವುದಂತೂ ನಿಜ. ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ ಎಂದು ಪ್ರತಿ ಬಾರಿಯೂ ಒಂದೊಂದು ಉದಾಹರಣೆಗಳಿಂದ ಸಾಬೀತಾಗುತ್ತದೆ. ಹಾಗೂ ಭೂಮಿಯು ಶಾಶ್ವತವಲ್ಲ ಎಂಬುದು ಮಾನವರಲ್ಲಿ ಕಳವಳದ ವಿಷಯವಾಗಿ ಇಂದು ಮುಂದೆಯೂ ಇರಬಹುದು.

LEAVE A REPLY

Please enter your comment!
Please enter your name here