ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಸ್ಕ್ಯಾನ್. ಈ ವಿಧಾನ ಸಾಮಾನ್ಯವಾಗಿ 15 ರಿಂದ 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಿಧಾನದಲ್ಲಿ ದೇಹದ ಯಾವ ಭಾಗವನ್ನು ಸ್ಕ್ಯಾನ್ ಮಾಡಬೇಕು, ಎಷ್ಟು ಫೋಟೋಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅಂಶವೂ ಬಹಳ ಮುಖ್ಯ. ಇನ್ನು ಈ ಯಂತ್ರ ಮ್ಯಾಗ್ನೆಟಿಕ್ ಫೀಲ್ಡ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಮೆದುಳು, ಮೊಣಕಾಲು, ಬೆನ್ನುಹುರಿಯಂತಹ ದೇಹದ ವಿವಿಧ ಭಾಗಗಳ ಸ್ಕ್ಯಾನ್ ಮಾಡಿ ಯಾವ ಭಾಗದಲ್ಲಿ ತೊಂದರೆ ಇದೆ ಎಂಬುದನ್ನ ತಿಳಿದುಕೊಳ್ಳಬಹುದಾಗಿದೆ.
ಆದರೆ ಇದೇ ಎಂಆರ್ಐ ಸ್ಕ್ಯಾನ್ನಿಂದ ಮುಂಬೈ ಆಸ್ಪತ್ರೆಯಲ್ಲಿ ಒಂದು ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡುವಾಗ 32 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ವ್ಯಕ್ತಿಯ ಶರೀರದಲ್ಲಿ ಅಗತ್ಯಕ್ಕಿಂತ ಜಾಸ್ತಿ ದ್ರವ ರೂಪದ ಆಮ್ಲಜನಕ ಸೇರಿ ಈ ದುರ್ಘಟನೆ ಸಂಭವಿಸಿದೆ. ದ್ರವ ರೂಪದ ಆಮ್ಲಜನಕ ವಿಷಕಾರಿಯಾಗಿರುತ್ತದೆ.
ಸ್ಕ್ಯಾನಿಂಗ್ ಮಾಡಿಸಲು ಹೋಗುವಾಗ ಯಾವುದೇ ಹೇರ್ ಪಿನ್, ಉಂಗುರ, ಲೋಹದ ಬಳೆ ಮುಂತಾದ ಲೋಹದ ವಸ್ತುಗಳನ್ನು ಧರಿಸಬೇಡಿ. ಸ್ಕ್ಯಾನರ್ ಶಕ್ತಿಯುತ ಕಾಂತಕ್ಷೇತ್ರವನ್ನು ಹೊಂದಿರುತ್ತದೆ.ಇವು ಅಪಾಯಕ್ಕೆ ದಾರಿ ಮಾಡಿಕೊಡುತ್ತವೆ. ಸ್ಕ್ಯಾನ್ಗಿಂತ ನಾಲ್ಕು ಗಂಟೆ ಮೊದಲು ಆಹಾರ ಸೇವಿಸಿ, ಹೆಚ್ಚು ನೀರು ಕುಡಿದ್ರೆ ಒಳ್ಳೆಯದು.