ಊಟಕ್ಕೆ ಇಲ್ಲದವನು ಇಂದು ನಿತ್ಯ 1000 ಮಂದಿಯ ಹಸಿವು ನೀಗುಸುತ್ತಿರುವ ಹೈದರಾಬಾದಿನ ಯುವಕ ಅಜ್ಹರ್

0
168

ಅನ್ನದಾತ ಸುಖೀಭವ ಎನ್ನುತ್ತಾರೆ. ನಾವು ಒಬ್ಬರ ಹಸಿವನ್ನು ನೀಗಿಸಿದರೆ ಎಷ್ಟು ಖುಷಿಯಾಗುತ್ತದೆ ಅಲ್ಲವೇ? ಇನ್ನು ನಿತ್ಯ 400 ಮಂದಿ ಹಸಿವು ನೀಗುತ್ತಿರುವ ಹೈದರಾಬಾದಿನ ಯುವಕನ ಕಥೆ ಇದು. ಹೈದರಾಬಾದಿನ ಪಾತಬಸ್ತಿ ಮೂಲದ ಅಜಹರ್ ಮಖ್ಸೂಸಿ ದೇಶದ ಯುವಕರೆಲ್ಲಾರಿಗೂ ಆದರ್ಶಪ್ರಾಯ. ಅಜಹರ್ ಮಖ್ಸೂಸಿ ಚಿಕ್ಕಂದಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡ.

ಜತೆಗೆ ಕಿತ್ತು ತಿನ್ನುವ ಬಡತನ. ಅದೆಷ್ಟೋ ನಿದ್ದೆ ಇಲ್ಲದ ಹಸಿವಿನ ರಾತ್ರಿಗಳನನ್ನು ಅನುಭವಿಸಿದ್ದಾನೆ. ಆಗಲೇ ಒಂದು ನಿರ್ಧಾರಕ್ಕೆ ಬಂದ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ನಿಧಾನಕ್ಕೆ ಕಷ್ಟಪಡುತ್ತಾ ಸ್ವತಂ ಇಂಟೀರಿಯರ್ ಡಿಸೈನಿಂಗ್ ಬಿಸಿನೆಸ್ ಆರಂಭಿಸಿದ. ಹಣ ಸಂಪಾದಿಸುತ್ತಾ ವ್ಯಾಪಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾನೆ.

ಆ ಸಮಯದಲ್ಲಿ ಡಬೀರ್ ಪುರ ಬ್ರಿಡ್ಜ್ ದಾಟುತ್ತಿರಬೇಕಾದರೆ, ಹಸಿವಿನಿಂದ ಅನ್ನ ಬೇಕೆಂದು ಒಬ್ಬಾಕೆ ತುಂಬಾ ಮಂದಿಯಲ್ಲಿ ಬೇಡಿಕೊಳ್ಳುತ್ತಿದ್ದರು. ಅದನ್ನು ನೋಡಿ ಅಜಹರ್‌ಗೆ ತನ್ನ ಬಾಲ್ಯದ ದಿನಗಳು ನೆನಪಾದವು. ಕೂಡಲೆ ಆಕೆ ಬಳಿಗೆ ಹೋಗಿ ಆಕೆಯನ್ನು ಹೋಟೆ‌ಲ್‌ಗೆ ಕರೆದೊಯ್ದು ಅನ್ನ ಕೊಡಿಸಿದ. ಆ ದಿನ ಮನೆಗೆ ಹೋದ ಮೇಲೆ ಮಲಗಿದ ಬಳಿಕ ಆ ಬ್ರಿಡ್ಜ್ ಬಳಿ ಹಸಿವಿನಿಂದ ಬೇಡಿಕೊಳ್ಳುತ್ತಿರುವ ಆ ಮಹಿಳೆ ನೆನಪಾಗುತ್ತಿದ್ದಳು.

ಆ ಬ್ರಿಡ್ಜ್ ಬಳಿ ಅದರ ಸುತ್ತಮುತ್ತ ಇನ್ನೂ ಸಾಕಷ್ಟು ಮಂದಿ ಹಸಿವಿನಿಂದ ಒದ್ದಾಡುತ್ತಿರುವವರು ಇದ್ದಾರೆ ಎಂಬುದನ್ನು ತಿಳಿದ. ಆಗಲೇ ಅಂತಹವರಿಗೆ 200 ರಿಂದ 400 ಮಂದಿಗೆ ಊಟ ಹಾಕಬೇಕು ಎಂದು ಬಯಸಿದ. ಬಳಿಕ ತನ್ನ ಸ್ನೇಹಿತರನ್ನು ಭೇಟಿಯಾಗಿ ಅಷ್ಟು ಮಂದಿಗೆ ಊಟ ಹಾಕಬೇಕಾದರೆ ಎಷ್ಟು ಹಣ ಬೇಕಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ. ತಾವೇ ಅನ್ನ, ಸಾಂಬಾರ್ ಮಾಡಿದರೆ ಕಡಿಮೆ ಎಂದರೂ ನಿತ್ಯ ರೂ.1500 ರಿಂದ ರೂ.2000 ಖರ್ಚಾಗುತ್ತದೆ.

ಅದು 2015ರ ಮಾತು. ಈಗ ಖರ್ಚು ಇನ್ನಷ್ಟು ಜಾಸ್ತಿಯಾಗಿರಬಹುದು. ಆದರೂ ಆ ಸಮಯದಲ್ಲಿ ಅಜಹರ್ ಅದ್ಯಾವುದನ್ನೂ ಆಲೋಚಿಸಲಿಲ್ಲ. ಒಂದು ವರ್ಷ ಕಾಲ ಆಗುವ ಖರ್ಚು ಎಷ್ಟಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿದ. ತನ್ನ ಸಂಪಾದನೆಯಿಂದ ಆ ಖರ್ಚನ್ನು ಭರಿಸಬೇಕೆಂದು ಅವರು ಭಾವಿಸಿದರು.

ಅಷ್ಟೇ ಇನ್ನೇನು ಆಲೋಚಿಸಲಿಲ್ಲ. ಕನಿಷ್ಠ ದಿನವೊಂದಕ್ಕೆ 400 ಮಂದಿಗೆ ಆಹಾರ ನೀಡಬೇಕೆಂದು ಅವರು ನಿರ್ಧರಿಸಿದರು. ಕಳೆದ ಕೆಲವು ವರ್ಷಗಳಿಂದ ಅವರು ಹೈದರಾಬಾದ್ ನಗರದಲ್ಲಿ ಈ ರೀತಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಜನ ಹೆಚ್ಚಾದಾಗ ಅವರಿಗೆ ಕಷ್ಟವಾಗುತ್ತಿತ್ತು. ಅಂದುಕೊಂಡ ಸಂಖ್ಯೆಗಿಂತ ಹೆಚ್ಚಿನ ಜನ ಬಂದರೆ ಅವರನ್ನು ಹಸಿವಿನಿಂದ ಇರುವವರನ್ನು ವಾಪಸ್ ಕಳಿಸಲು ನೋವಾಗುತ್ತಿತ್ತು.

ಇದನ್ನು ತನ್ನ ಸಹ ವ್ಯಾಪಾರಿಗಳ ಬಳಿ ಹೇಳಿಕೊಂಡ. ಕೆಲವರು ಬೇಳೆ, ಅಕ್ಕಿ ಮುಂತಾದ ವಸ್ತುಗಳನ್ನು ನೀಡಲು ಮುಂದೆ ಬಂದರು. ಇದರಿಂದಾಗಿ ಅಜಹರ್‌ಗೆ ಸ್ವಲ್ಪ ಭಾರ ಕಡಿಮೆ ಆಯಿತು. ಕೆಲವರು ಸ್ನೇಹಿತರು ಕೈ ಜೋಡಿಸಿ ಈ ಕಾರ್ಯಕ್ರಮವನ್ನು ಇನ್ನಷ್ಟು ಊರುಗಳಿಗೆ ವಿಸ್ತರಿಸಿದರು. ಬೆಂಗಳೂರು, ರಾಯಚೂರು, ಜಾರ್ಖಂಡ್, ಅಸ್ಸಾಂ‍ಗಳಲ್ಲಿ ಸಹ ಆರಂಭವಾಯಿತು. ಸದ್ಯಕ್ಕೆ ದೇಶದಾದ್ಯಂತ ನಿತ್ಯ 1200 ರಿಂದ 1500 ಮಂದಿಗೆ ಅನ್ನ ನೀಡುತ್ತಿದ್ದಾರೆ ಅಜಹರ್.

LEAVE A REPLY

Please enter your comment!
Please enter your name here