ಈ ವ್ಯಕ್ತಿಯ ಶರೀರದಲ್ಲಿ ಗಿಡ ಬೆಳೆಯುತ್ತಿದೆ ! ನಂಬಿಕೆ ಇಲ್ಲ ಅಂದ್ರೆ ನೀವೇ ನೋಡಿ

0
219

ಕಾಡು, ಮೇಡು, ತೋಟ, ಹೊಲ ಗದ್ದೆಗಳಲ್ಲಿ ಮರ ಗಿಡಗಳನ್ನು ಬೆಳೆಯುವುದನ್ನು
ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಆದರೆ ಬ್ಲಾಂಗ್ಲಾದೇಶದ ಈ ವ್ಯಕ್ತಿ ಟ್ರೀ ಮ್ಯಾನ್‍ ಎಂದೇ ಖ್ಯಾತಿ
ಪಡೆದವರಾಗಿದ್ದಾರೆ. 29 ವರ್ಷದ ಅಬುನ್‍ ಬಚಂದ್ರ ಅವರಿಗೆ ಒಬ್ಬ ಮಗಳೂ ಇದ್ದಾಳೆ. ಆಕೆಯನ್ನು ಎತ್ತಿಕೊಳ್ಳಬೇಕು.
ಆಟವಾಡಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಅದು ಆತನಿಗೆ ಸಾಧ್ಯವಾಗುವುದಿಲ್ಲ.

ಏಕೆಂದರೆ ಆತ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದೇನೆಂದರೆ
ಅವರು ದೇಹದ ಭಾಗಗಳಲ್ಲಿ ಮರದ ತೊಗಟೆ ಬೆಳೆಯುತ್ತದೆ. ಇದರಿಂದಾಗಿ ಅವರು ತಮ್ಮ ಕೈ ಮತ್ತು ಕಾಲುಗಳಲ್ಲಿ
ಸುಮಾರು 5 ಕೆಜಿಯಷ್ಟು ಭಾರವನ್ನು ಹೊರಬೇಕಾಗುವ ಸ್ಥಿತಿ ಉಂಟಾಗಿದೆ. ಕಳೆದ 10 ವರ್ಷಗಳಿಂದಲೂ ಈ ಕಾಯಿಲೆಯಿಂದ
ಬಳಲುತ್ತಿದ್ದಾರೆ.

ಆರಂಭದ ದಿನಗಳಲ್ಲಿ ತಾವೇ ಈ ಮರದ ತೊಗಟೆಗಳನ್ನು ಕತ್ತರಿಸುತ್ತಿದ್ದರು.
ಆದರೆ, ದಿನಕಳೆದಂತೆ ಈ ರೋಗ ದೇಹದ ತುಂಬೆಲ್ಲಾ ಹರಡಿಕೊಂಡಿದೆ. ಈ ರೋಗದ ಸಲುವಾಗಿ ಇಡೀ ಪ್ರಪಂಚವೇ ಇವರ
ಬಳಿ ತಿರುಗಿ ನೋಡುವಂತೆ ಮಾಡಿತ್ತು. ಈ ಸಂಬಂಧ ಢಾಕಾ ಮೆಡಿಕಲ್‍ ಕಾಲೇಜಿಗೆ ಬಂದಿದ್ದರು. ಆಗಿನಿಂದ
ಅಬುಲ್‍ ಅವರು ಟ್ರೀ ಮ್ಯಾನ್‍ ಎಂದು ಭಾರಿ ಪ್ರಸಿದ್ಧಿಯನ್ನು ಪಡೆದುಕೊಂಡರು.

ಈತನಿಗೆ ಈಗಾಗಲೇ 25 ಬಾರಿ ಶಸ್ತ್ರಚಿಕಿತ್ಸೆ ಕೂಡ ನಡೆದಿದೆ.
ಆಗೆಲ್ಲಾ ಈ ರೋಗದಿಂದ ಅಬುಲ್‍ ಅವರಿಗೆ ಮುಕ್ತಿ ಸಿಗುತ್ತದೆ ಎಂದು ವೈದ್ಯರು ಭಾವಿಸಿದ್ದರು. ಆದರೆ
ಅಬುಲ್‍ ಅವರು ಆಸ್ಪತ್ರೆಯಿಂದ ಹೇಳದೇ ಕೇಳದೇ ಓಡಿ ಹೋದ ಪರಿಣಾಮವಾಗಿ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಇದರ ಪರಿಣಾಮವಾಗಿ ಮತ್ತೆ ಮರದ ಸಂರಚನೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಮತ್ತೊಮ್ಮೆ
ಹಲವಾರು ಶಸ್ತ್ರಚಿಕಿತ್ಸೆಗಳು ಆಗಬೇಕಿದೆ.

ವೈದ್ಯರ ಪ್ರಕಾರ, ಜಗತ್ತಿನಲ್ಲಿ ಬಹಳ ಅಪರೂಪವಾಗಿ ಕಾಣಿಸಿಕೊಳ್ಳುವ
ಕಾಯಿಲೆ ಇದಾಗಿದೆ. ಪ್ರಪಂದಾದ್ಯಂತ ಕೇವಲ 6 ಜನರು ಮಾತ್ರವೇ ಈ ರೋಗದಿಂದ ಬಳಲುತ್ತಿದ್ದಾರೆ. ಅಬುಲ್‍
ಅವರು ತಮ್ಮ ರೋಗದ ಸಂಬಂಧ ಭಾರತದ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ಅವರ ಬಳಿ ಅಷ್ಟೊಂದು ಹಣವಿರಲಿಲ್ಲ.
ಆದರೆ ಬಾಂಗ್ಲಾದೇಶದ ಸರ್ಕಾರದ ನೆರವಿನಿಂದ ಢಾಕಾ ಮೆಡಿಕಲ್‍ ಕಾಲೇಜಿನಲ್ಲಿ ಉಚಿತ ಶಸ್ತ್ರ ಚಿಕಿತ್ಸೆ
ಮಾಡಲಾಯಿತು. ಅಬುಲ್‍ ಅವರು ಬೇಗನೆ ಗುಣಮುಖರಾಗಲಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here