ಪ್ರತಿನಿತ್ಯ ಮಾಡುವ ಅಡುಗೆಗಾಗಿ ನಾವು ಸೊಪ್ಪು, ತರಕಾರಿಗಳನ್ನು ಮಾರುಕಟ್ಟೆಯಿಂದ ತಂದು ಬಳಸುತ್ತೇವೆ. ಆದರೆ ತರಕಾರಿಗಳು ಒಂದು ದಿನಕ್ಕೂ ಹೆಚ್ಚು ಕಾಲ ಉಳಿಯುವುದಿಲ್ಲ ಹಾಗಾಗಿ ನಾವು ಫ್ರಿಡ್ಜ್ ನೊಳಗೆ ಇಡುವ ಅಭ್ಯಾಸ ಮಾಡುತ್ತಿವಿ.ಬ್ರೆಡ್ ,ಮೊಟ್ಟೆ ಇಂಥ ಹಲವು ಬಗೆಯ ತಿನಿಸುಗಳು ಹೆಚ್ಚು ದಿನಗಳ ಕಾಲ ಇರುವುದಿಲ್ಲ. ಹಾಗಾಗಿ ನಾವು ಫ್ರಿಡ್ಜ್ನಲ್ಲಿ ಇಡುವ ಅಭ್ಯಾಸ ರೂಢಿಸಿಕೊಂಡಿರುತೇವೆ. ಫ್ರಿಡ್ಜ್ನಲ್ಲಿ ಈ ಪದಾರ್ಥಗಳನ್ನು ಯಾಕೆ ಇಡಬಾರದು ಎಂದು ತಿಳಿದುಕೊಳ್ಳಲು ಕೆಳಗೆ ತಿಳಿಸಲಾಗಿದೆ ಅನುಸರಿಸಿ,
೧.ತರಕಾರಿಯಲ್ಲಿ ಆಲೂಗಡ್ಡೆಯನ್ನು ಹಲವಾರು ಜನ ದಿನನಿತ್ಯದ ಅಡುಗೆಯಲ್ಲಿ ಹೆಚ್ಚು ಬಳಸುತ್ತಾರೆ. ಹಾಗಾಗಿ ಫ್ರಿಡ್ಜ್ನಲ್ಲಿ ಇಟ್ಟು ಬಹಳ ದಿನ ಉಪಯೋಗಿಸುವ ಯೋಚನೆ ಮಾಡುತ್ತಾರೆ.ಆಲೂಗಡ್ಡೆ ಜಾಸ್ತಿ ದಿನ ಫ್ರಿಡ್ಜ್ನಲ್ಲಿ ಇಟ್ಟರೆ ಬೇಗ ಕೊಳೆತು ಹೋಗುತ್ತದೆ.
೨.ಪ್ರತಿದಿನ ಬೆಳಗ್ಗೆ ಬ್ರೆಡ್ ಸೇವನೆ ಮಾಡುವ ಅಭ್ಯಾಸ ಇರುವವರು ಬ್ರೆಡ್ಗಳನ್ನು ಖರೀದಿಸಿ ಫ್ರಿಡ್ಜ್ ನಲ್ಲಿಟ್ಟು ತಿನ್ನುತ್ತಾರೆ. ಆದರೆ ಬ್ರೆಡ್ ಹೆಚ್ಚು ಕಾಲ ಕೂಲ್ ಜಾಗದಲ್ಲಿ ಇರುವುದರಿಂದ ಬೇಗನೆ ಹಾಳಾಗುತ್ತದೆ ಜೊತೆಗೆ ಅದರ ತಾಜಾತನ ಕಳೆದುಕೊಳ್ಳುತ್ತದೆ.
೩.ಊಟವಾದ ಬಳಿಕ ಬಾಳೆಹಣ್ಣು ತಿನ್ನುವ ಅಭ್ಯಾಸ ಇರುವವರು ಕೆಜಿಗಟ್ಟಲೆ ಬಾಳೆಹಣ್ಣನ್ನು ತಿನ್ನಲು ಫ್ರಿಡ್ಜ್ನಲ್ಲಿ ಇಟ್ಟು ಬಳಸುತ್ತಾರೆ. ಆದರೆ ಅದು ತಪ್ಪು ಬಾಳೆಹಣ್ಣು ಹೆಚ್ಚು ದಿನ ಫ್ರಿಡ್ಜ್ನಲ್ಲಿ ದ್ದರೆ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ.
೪.ಬೆಳ್ಳುಳ್ಳಿಯನ್ನು ಕೂಲರ್ನಲ್ಲಿ ಇಡಬಾರದು ಯಾಕೆಂದರೆ ಫ್ರಿಡ್ಜ್ನಿನಲ್ಲಿ ತೇವಾಂಶ ಹೆಚ್ಚಿರುವ ಕಾರಣ ಬೆಳ್ಳುಳ್ಳಿಯಲ್ಲಿ ಇರುವ ತಾಜಾತನ ಮತ್ತು ಆರೋಗ್ಯಕ್ಕೆ ಬೇಕಾಗುವ ಪೋಷಕಾಂಶಗಳು ಹಾಳಾಗುತ್ತದೆ.