ಇವ್ರ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ?

0
305

ಎಲ್ಲಾ ಕೋಟಿ ಲೆಕ್ಕದಲ್ಲೇ ಕ್ರಿಕೆಟ್‍ ಜಗತ್ತಿನಲ್ಲಿ ಅತಿ ಹೆಚ್ಚು ಫ್ಯಾನ್ಸ್‍ ಗಳನ್ನು ಹೊಂದಿರುವ ದೇಶ ಎಂದರೆ ಭಾರತ ಮಾತ್ರ. ಕ್ರಿಕೆಟ್‍ ಒಂದು ರೀತಿ ಜೂಜು ಇದ್ದಂತೆ. ಇಲ್ಲಿ ಸಾಕಷ್ಟು ವಿವಾದಗಳು ಆಗಾಗ ಸೃಷ್ಟಿಯಾಗುವುದು ಸರ್ವೇ ಸಾಮಾನ್ಯ. ಇಲ್ಲಿ ಹಣಕಾಸಿನ ಹೊಳೆಯೇ ಹರಿಯುತ್ತದೆ. ಹಣಕ್ಕೆ ಯಾವುದೇ ಕೊರತೆಯೇ ಇಲ್ಲದಂತೆ ನಡೆಯುವ ಆಟಗಳಲ್ಲಿ ಕ್ರಿಕೆಟ್‍ ಕೂಡ ಒಂದು.

ಕ್ರಿಕೆಟ್‍ ಆಟದ ಬಗ್ಗೆ ಒಲವು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಕ್ರಿಕೆಟ್‍ ಆಟಗಾರರ ಬಗ್ಗೆ, ಅವರು ಆಡುವ ಪಂದ್ಯಗಳು, ಅವರಿಗೆ ಸಿಗುವ ಸಂಬಳ, ಸೌಲಭ್ಯಗಳ ಬಗ್ಗೆ ಸಾಕಷ್ಟು ಕುತೂಹಲವನ್ನು ಹೊಂದಿರುತ್ತಾರೆ. ಅದು ಸಹಜವೂ ಹೌದು. ಇಲ್ಲಿ ನಾವಿಂದು ಕ್ರಿಕೆಟ್‍ ಜಗತ್ತಿನ ಆಟಗಾರರ ಸಂಬಳದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಪ್ರಸ್ತುತ ಇಂಗ್ಲೆಂಡ್‍ ನಲ್ಲಿ ನಡೆಯುತ್ತಿರುವ ವಿಶ್ವಕಪ್‍ ಪಂದ್ಯಾವಳಿಯೂ ಕೂಡ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆಯುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.

ಹಾಗಾದರೆ, ಒಂದು ದಿನ ಒಬ್ಬ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‍ ಪಂದ್ಯವನ್ನಾಡಿದರೆ ಎಷ್ಟು ಸಂಬಳವನ್ನು ಪಡೆಯುತ್ತಾನೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಪ್ರಪಂಚದಲ್ಲಿ ಯಾವ ಯಾವ ದೇಶಗಳಲ್ಲಿ ಕ್ರಿಕೆಟ್‍ ಆಟವನ್ನು ಆಡುತ್ತಾರೋ ಆ ಎಲ್ಲಾ ದೇಶಗಳಲ್ಲಿ ಒಂದು ಬೋರ್ಡ್‍ ಕಮಿಟಿ ಇದ್ದೇ ಇರುತ್ತದೆ. ಅದೇ ರೀತಿ ಭಾರತದಲ್ಲಿ ಬೋರ್ಡ್‍ ಆಫ್‍ ಕಂಟ್ರೋಲ್‍ ಫಾರ್‍ ಕ್ರಿಕೆಟ್‍ ಇನ್‍ ಇಂಡಿಯಾ ಬಿಸಿಸಿಐ ಇರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿಯೇ ಆಗಿದೆ.

ಭಾರತದಲ್ಲಿ ಬಿಸಿಸಿಐ ಎಲ್ಲಾ ಆಟಗಾರರಿಗೂ ಒಂದೇ ರೀತಿಯ ಸಂಬಳ ನೀಡುತ್ತದೆ. ಅದಕ್ಕಾಗಿ ಬೇರೆ ಬೇರೆ ವಿಭಾಗಗಳನ್ನು ಮಾಡಲಾಗಿದೆ. ಪ್ರತಿಯೊಬ್ಬ ಆಟಗಾರನಿಗೂ ಅಮೆರಿಕನ್‍ ಡಾಲರ್‍ ಲೆಕ್ಕದಲ್ಲಿ ಸಂಬಳ ನೀಡಲಾಗುತ್ತದೆ. ಮೊದಲು ಎ+ ವಿಭಾಗದ ಆಟಗಾರರಿಗೆ ವರ್ಷಕ್ಕೆ 7 ಕೋಟಿ ರೂಪಾಯಿ ನೀಡಲಾಗುತ್ತದೆ. ಎ ವಿಭಾಗದ ಆಟಗಾರರಿಗೆ ಸುಮಾರು ವರ್ಷಕ್ಕೆ 5 ಕೋಟಿ ರೂಪಾಯಿ ಕೊಡಲಾಗುತ್ತದೆ. ಬಿ ವಿಭಾಗದ ಆಟಗಾರರಿಗೆ 3 ಕೋಟಿ ರೂಪಾಯಿ ಮತ್ತು ಸಿ ವಿಭಾಗದ ಆಟಗಾರರಿಗೆ ವರ್ಷಕ್ಕೆ 1 ಕೋಟಿ ರೂಪಾಯಿ ನೀಡಲಾಗುತ್ತದೆ.

ಇದಲ್ಲದೇ, ಒಂದು ಟೆಸ್ಟ್‍ ಪಂದ್ಯವನ್ನು ಆಡಿದರೆ, ಪ್ರತಿ ಆಟಗಾರನಿಗೂ 23,000 ಡಾಲರ್‍ ಹಣ ಸಿಗುತ್ತದೆ. ಅಂದರೆ ಒಬ್ಬ ಆಟಗಾರನಿಗೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 16,10,000 ರೂಪಾಯಿ ಸಿಗುತ್ತದೆ. ಅದೇ ರೀತಿ ಒಂದು ದಿನದ ಪಂದ್ಯವನ್ನು ಆಡಿದರೆ, 9,000 ಡಾಲರ್‍ ಸಿಗುತ್ತದೆ. ಇದಷ್ಟೇ ಅಲ್ಲದೇ, ಒಂದು ದಿನದ ಪಂದ್ಯದಲ್ಲಿ ಶತಕ ಬಾರಿಸಿದರೆ 5 ಲಕ್ಷ ರೂಪಾಯಿ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ.

ಉತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಗಿಫ್ಟ್‍ ಮತ್ತು ಬಹುಮಾನದ ರೂಪದಲ್ಲಿ ಸಾಕಷ್ಟು ಹಣ ಸಿಗುತ್ತದೆ. ಪ್ರತಿ ವರ್ಷ ದೊರೆಯುವ ಸಂಬಳದಲ್ಲೂ ಇದು ಏರುಪೇರಾಗುತ್ತಿರುತ್ತದೆ. ಅಲ್ಲದೇ, ಪ್ರತಿ ವರ್ಷ ಆಟಗಾರನ ಪ್ರದರ್ಶನದ ಆಧಾರದ ಮೇಲೆ ವಿಭಾಗಗಳನ್ನು ಬದಲಾಯಿಸಲಾಗುತ್ತದೆ. ಟೆಸ್ಟ್‍ ಪಂದ್ಯದಲ್ಲಿ ದ್ವಿಶತಕ ಬಾರಿಸಿದರೆ, 7 ಲಕ್ಷ ರೂಪಾಯಿ ಹಣವನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತದೆ. ಬಹುಮಾನಗಳು ಎಲ್ಲಾ ವಿಭಾಗದವರಿಗೂ ಒಂದೇ ಆಗಿರುತ್ತದೆ.

ಬೌಲರ್‍ ಗಳಿಗೆ ಬಂದಾಗ, ಒಂದು ಪಂದ್ಯದಲ್ಲಿ 5 ವಿಕೆಟ್‍ ಪಡೆದರೆ, 5 ಲಕ್ಷ ಬೋನಸ್‍ ಹಣ ಸಿಗುತ್ತದೆ. ಟೆಸ್ಟ್‍ ಪಂದ್ಯದಲ್ಲಿ 10 ವಿಕೆಟ್‍ ಪಡೆದರೆ, 7 ಲಕ್ಷ ರೂಪಾಯಿ ಬೋನಸ್‍ ನೀಡಲಾಗುತ್ತದೆ. ಬಿಸಿಸಿಐ ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್‍ ಬೋರ್ಡ್‍ ಅಂತ ಹೆಸರು ಮಾಡಿದೆ. ಹಾಗಾಗಿ, ಇಲ್ಲಿ ಹಣಕಾಸಿಗೇನೂ ಕೊರತೆ ಇಲ್ಲ. ಅಲ್ಲದೇ, ಯಾವುದೇ ಆಟಗಾರ ಜಾಹೀರಾತು ಅಥವಾ ಕಂಪನಿಯ ರಾಯಭಾರಿಯಾಗಿ ಆಯ್ಕೆಯಾದರೆ ನೂರಾರು ಕೋಟಿ ರೂಪಾಯಿ ಹಣ ಹರಿದು ಬರುತ್ತದೆ. ಇದೇ ಕಾರಣಕ್ಕಾಗಿ ಹೇಳಿದ್ದು, ಕ್ರಿಕೆಟ್‍ ನಲ್ಲಿ ಹಣಕಾಸಿಗೇನೂ ಕೊರತೆ ಇಲ್ಲ ಎಂದು.

LEAVE A REPLY

Please enter your comment!
Please enter your name here