ಆಷಾಡ ಶುಕ್ರವಾರದಂದು ಹೀಗೆ ಮಾಡಿದರೆ ಎಂತಹ ಕಷ್ಟಗಳಿಂದಲೂ ಮುಕ್ತಿ…!!

0
280

ಸಾಮಾನ್ಯವಾಗಿ ಹಿಂದೂಗಳಲ್ಲಿ ಆಷಾಡ ಮಾಸ ಬಹಳ ವಿಶೇಷವಾದುದು. ಅದರಲ್ಲೂ ಆಷಾಡ ಮಾಸದ ಶುಕ್ರವಾರದಂದು ದೇವಿ ದೇವಸ್ಥಾನಗಳಿಗೆ ಹೋಗಿ ಪೂಜೆ, ಪುನಸ್ಕಾರ ಮಾಡುವ ಸಂಪ್ರದಾಯ ನಮ್ಮಲ್ಲಿ ನಡೆದುಕೊಂಡು ಬಂದಿದೆ. ಇಂತಹ ದಿನಗಳಲ್ಲಿ ಹೀಗೆ ಮಾಡಿದರೆ, ನಿಮ್ಮ ಶತ್ರುಗಳು ನಿಮಗೆ ಆಗದಂತೆ ಮಾಡಿರುವ ಯಾವುದೇ ಮಾಟ, ಮಂತ್ರಗಳು ಕೂಡ ನಾಶವಾಗುತ್ತದೆ.
ಸಾಮಾನ್ಯವಾಗಿ ನಮ್ಮ ಬದುಕಿನಲ್ಲಿ ಏನೆಲ್ಲಾ ಕಷ್ಟಗಳು ಎದುರಾಗುತ್ತಿರುತ್ತದೆ. ಅಲ್ಲದೇ, ಅವುಗಳಿಂದ ಹೊರ ಬರಲಾರದೇ ಸಾಕಷ್ಟು ಒದ್ದಾಡುತ್ತಿರುತ್ತೇವೆ. ಕೆಲವೊಮ್ಮೆ ನಮ್ಮ ಹಿತ ಶತ್ರುಗಳು, ನಮ್ಮ ಸಂಬಂಧಿಕರು ಕೂಡ ನಮಗೆ ತೊಂದರೆ ಕೊಡುತ್ತಿರುತ್ತಾರೆ. ಹಾಗಾಗಿ ಈ ಎಲ್ಲಾ ರೀತಿಯ ತೊಂದರೆಗಳಿಂದ ದೂರವಾಗಬೇಕಾದರೆ, ಆಷಾಡ ಶುಕ್ರವಾರದಂದು ಹೀಗೆ ಮಾಡಿ. ಈಗಾಗಲೇ ಎರಡು ಶುಕ್ರವಾರಗಳು ಕಳೆದಿದೆ. ಇನ್ನು ಎರಡು ಶುಕ್ರವಾರ ಬಾಕಿ ಇದೆ. ಆಷಾಡ ಮಾಸ ಬಹಳ ವಿಶೇಷವಾದ ಮಾಸಗಳಲ್ಲಿ ಒಂದಾಗಿದೆ. ಶ್ರಾವಣ ಮಾಸ ವಿಷ್ಣುವಿನ ಆರಾಧನೆಗೆ ಮೀಸಲಾದರೆ, ಕಾರ್ತಿಕ ಮಾಸ ಶಿವನಿಗೆ ಮೀಸಲಾಗಿರುವ ಮಾಸ. ಆದರೆ ಆಷಾಡ ಮಾಸದಲ್ಲಿ ಶಕ್ತಿ ದೇವತೆಗಳನ್ನು ಪೂಜೆ ಮಾಡಲಾಗುತ್ತದೆ.
ಆಷಾಡ ಮಾಸದಲ್ಲಿ ಶಕ್ತಿ ದೇವತೆಗಳನ್ನು ಆರಾದನೆ ಮಾಡಿದರೆ, ಆಕೆ ಮನುಷ್ಯರಿಗೆ ಬರುವ ಯಾವುದೇ ಕಷ್ಟಗಳನ್ನು ನಿವಾರಣೆ ಮಾಡಿ, ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಬಹುತೇಕ ನಮ್ಮ ಜನಗಳಲ್ಲಿ ಇದೆ. ಇದೇ ಕಾರಣಕ್ಕಾಗಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತ ಸಾಗರ ತುಂಬಿ ತುಳುಕುತ್ತಿರುತ್ತದೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ನೆಲೆಸಿರುವ ಹಿಂದೂಗಳು ಕೂಡ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ನೀವು ಕೂಡ ಯವುದಾದರೂ ಶಕ್ತಿ ದೇವಿ ಅಥವಾ ಗ್ರಾಮ ದೇವತೆಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಅದರಲ್ಲೂ ಆಷಾಡ ಶುಕ್ರವಾರದಂದು ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಅದರಲ್ಲೂ ನೂತನ ವಧು-ವರರು ದೇವಿಯ ದರ್ಶನ ಪಡೆದರೆ ಒಳ್ಳೆಯದು. ಅದರಲ್ಲೂ ಮೈಸೂರಿನ ಚಾಮುಂಡಿ ದೇವಿಯ ದರ್ಶನ ಮಾಡಿದರೆ ಇನ್ನಷ್ಟು ಉತ್ತಮ ಫಲಗಳು ಲಭ್ಯವಾಗುತ್ತದೆ. ಶಕ್ತಿ ದೇವತೆಗೆ ಬಳೆ, ಅರಿಶಿನ ಕುಂಕುಮವನ್ನು ಅರ್ಪಿಸುತ್ತಾ ಬನ್ನಿ. ಈ ವಿಶೇಷ ದಿನದಂದು ಸಾಧ್ಯವಾದಷ್ಟು ದೇವಿ ದೇವಸ್ಥಾನಕ್ಕೆ ಹೋಗಿ ಬನ್ನಿ ಆ ದೇವಿ ಕೃಪೆಗೆ ಪಾತ್ರರಾಗಿ. ನಿಮ್ಮ ಎಲ್ಲಾ ಕಷ್ಟಗಳನ್ನು ಆ ದೇವಿ ಪರಿಹರಿಸಲಿ ಎಂಬುದು ನಮ್ಮ ಆಶಯ.

LEAVE A REPLY

Please enter your comment!
Please enter your name here