ಅಸ್ತಮಾ ಸಮಸ್ಯೆ ಚಿಕ್ಕವಯಸ್ಸಿನ ಮಕ್ಕಳಿಂದ ವಯಸ್ಸಾದವರಿಗೂ ಕಾಡುವ ಸಮಸ್ಯೆಯಾಗಿದೆ.ಶ್ವಾಸಕೋಶಕ್ಕೆ ಸಂಬಂಧಿಸಿದ ಆಸ್ತಮಾ ಕಾಯಿಲೆ ಉಸಿರಾಟವನ್ನು ಏರುಪೇರು ಮಾಡುತ್ತದೆ. ಅಸ್ತಮಾ ಸಣ್ಣ ಕಾಯಿಲೆ ಎಂದು ಕೇವಲವಾಗಿ ನೋಡಿದರೆ ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡುಲಿದೆ.ಅಸ್ತಮಾ ಕಾಯಿಲೆಯಿಂದ ಗುಣಮುಕ್ತರಾಗಲು ಇಲ್ಲಿದೆ ಕೆಲ ಮನೆ ಮದ್ದು ಅನುಸರಿಸಿ,
೧.ಸಾಸಿವೆ ಎಣ್ಣೆಯನ್ನು ಕರ್ಪೂರದೊಂದಿಗೆ ಬಿಸಿ ಮಾಡಿ ನಿಮ್ಮ ಎದೆಯ ಭಾಗಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.
೨.ನೀಲಗಿರಿ ಎಣ್ಣೆ ಹಬೆಯನ್ನು ತೆಗೆದುಕೊಳ್ಳುವುದರಿಂದ ಉಸಿರಾಟ ಸುಗಮವಾಗಲಿದೆ.
೩.ದಾಳಿಂಬೆ, ಶುಂಠಿ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಪ್ರತಿನಿತ್ಯ ಎರಡು ಅಥವಾ ಮೂರು ಬಾರಿ ಸೇವಿಸುವುದು ಲಾಭದಾಯಕ.
೪.ಪ್ರತಿನಿತ್ಯ ಕಾಫಿಯನ್ನು ಸೇವನೆ ಮಾಡುವುದರಿಂದ ಅಸ್ತಮಾ ಕಂಟ್ರೋಲ್ಗೆ ಬರುತ್ತದೆ.