ಅಲೆಗ್ಸಾಂಡರ್ ದಿ ಗ್ರೇಟ್ ಬಗ್ಗೆ ಹೇಳುವಾಗ ಆತನ ತಾಯಿ ಒಲಂಪಿಯಾಸ್
ಬಗ್ಗೆ ಹೇಳುವುದನ್ನು ಮಾತ್ರ ಮರೆಯಲು ಸಾಧ್ಯವಿಲ್ಲ. ಮೆಸಿಡೋನ್ನ ರಾಜ ಫಿಲಪ್ ಮತ್ತು ಒಲಂಪಿಯಾಸ್
ನ ಮಗನೇ ಅಲೆಗ್ಸಾಂಡರ್. ಗ್ರೀಕ್ ಜಾನಪದ ಕಥೆಗಳ ಪ್ರಕಾರ, ಗ್ರೀಕ್ ದೇವತೆ ಜ್ಯೂಯೋಸ್ ತನ್ನನ್ನು
ತಾನು ಅರ್ಪಿಸಿಕೊಂಡಿದ್ದಳಂತೆ. ಅಲೆಗ್ಸಾಂಡರ್ ಒಲಂಪಿಯಾಸ್ ಮತ್ತು ಜ್ಯೂಯೋಸ್ ನ ಮಗ ಎಂದೇ ನಂಬಲಾಗುತ್ತದೆ.
ಈ ಕಥೆ ಹುಟ್ಟಿಕೊಳ್ಳಲು ಪ್ರಮುಖ ಕಾರಣ ಫಿಲಿಪ್ ಗೆ ಅಸಂಖ್ಯಾತ ಪತ್ನಿ ಮತ್ತು ಉಪಪತ್ನಿಯರು ಇದ್ದರು.
ಅಲ್ಲದೇ, ಆತ ಯಾವಾಗಲೂ ಯುದ್ಧದಲ್ಲಿ ಮುಳುಗಿರುತ್ತಿದ್ದ.
ಅವನ ವಿಲಾಸಗಳಲ್ಲಿ ಮುಳುಗಿ ಒಲಂಪಿಯಾಸ್ ಕಡೆಗೆ ಗಮನ ಕೊಡಲು
ಸಾಧ್ಯವಾಗಿರಲಿಲ್ಲ. ಇದೆಲ್ಲದರ ನಡುವೆ ಅಲೆಗ್ಸಾಂಡರ್ ಹುಟ್ಟಿದ್ದನು. ಅವನ ಜನನಕ್ಕೆ ಪ್ರಾವಿತ್ರ್ಯತೆ
ನೀಡುವ ಸಲುವಾಗಿ ಇಂತಹ ಕಥೆಯೊಂದು ಹುಟ್ಟಿಕೊಂಡಿತ್ತು ಎನ್ನಲಾಗಿದೆ. ಆದರೆ ಒಲಂಪಿಯಾಸ್ ಅದನ್ನೇ ಒಂದು
ಶಕ್ತಿಯನ್ನಾಗಿ ಬಳಸಿ, ನೀವು ಹುಟ್ಟಿರುವುದೇ ಜಗತ್ತನ್ನು ಗೆಲ್ಲುವುದಕ್ಕಾಗಿ ಎಂದು ಬೋಧಿಸಲು ತೊಡಗಿದಳು.
ದೈಹಿಕ ಹಾಗೂ ಮಾನಸಿಕವಾಗಿ ಜಗತ್ತಿನ ಬಲಾಢ್ಯ ವ್ಯಕ್ತಿಯನ್ನಾಗಿ ಮಾಡಲಾಗಿದೆ.
ಇದಕ್ಕೆ ಸರಿಯಾಗಿ ಅರಿಸ್ಟಾಟಲ್ ನಂತಹ ಗುರು ಕೂಡ ಸಿಕ್ಕದ್ದನು.
ಆತ 15ನೇ ವರ್ಷಕ್ಕೆ ಕಾಲಿಡುವುದಕ್ಕೂ ಮುನ್ನವೇ ಫಿಲಿಪ್ನ ಸೇನೆಯನ್ನು ಸೇರಿಕೊಂಡು ಸೇನೆಗೆ ದಂಡನಾಯಕನಾಗಿದ್ದನು.
ಈ ವೇಳೆಗಾಗಲೇ ಇಡೀ ಗ್ರೀಕ್ ದೇಶವನ್ನು ಗೆದ್ದಿದ್ದ, ಫಿಲಿಪ್ ನ ಜೊತೆಯಾಗಿದ್ದನು. ಕ್ರಿಪೂ 336ರ
ವೇಳೆಗೆ ಫಿಲಿಪ್ ಕೊಲೆಯಾಗಿ ಹೋಗುತ್ತಾನೆ. ಈ ಕೊಲೆಯ ಹಿಂದೆ ಒಲಂಪಿಯಾಸ್ ಮತ್ತು ಅಲೆಗ್ಸಾಂಡರ್
ಇದ್ದರು ಎನ್ನಲಾಗುತ್ತದೆ ಆದರೂ ಯಾವುದೇ ಪುರಾವೆಗಳು ಸಿಗುವುದಿಲ್ಲ.
20 ವರ್ಷದ ವೇಳೆಗೆ ಅಲೆಗ್ಸಾಂಡರ್ ಮೆಸಿಡೋನ್ ನ ರಾಜನಾಗುತ್ತಾನೆ.
ಅಲ್ಲಿಂದಲೇ ಆತನ ವಿಶ್ವ ವಿಜಯದ ಸರಮಾಲೆ ಪ್ರಾರಂಭವಾಗುತ್ತದೆ. ಆದರೆ ಭಾರತಕ್ಕೆ ಪ್ರವೇಶ ಮಾಡುವುದಕ್ಕೂ
ಮುನ್ನಾ ಪುರೂರವ ರಾಜನಿಂದ ಸೋಲನ್ನು ಅನುಭವಿಸಿ ಒಪ್ಪಂದವನ್ನು ಮಾಡಿಕೊಂಡು ತನ್ನ ದೇಶಕ್ಕೆ ಹಿಂತಿರುಗುತ್ತಾನೆ.
ಭಾರತದಿಂದ ಬೀಳ್ಕೊಂಡ ನಂತರ ಅಲೆಕ್ಸ್ ಬ್ಯಾಬಿಲೋನಿಯಾಕ್ಕೆ ತಲುಪುವ ವೇಳೆಗೆ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
ಅಲ್ಲದೇ, ತನ್ನ ಕೊನೆಯುಸಿರೆಳದನು.
ಅದಕ್ಕೂ ಮುನ್ನಾ, ತನ್ನ ಉತ್ತರಾಧಿಕಾರಿ ಯಾರು ಎಂದು ಕೇಳಿದ
ಪ್ರಶ್ನೆಗೆ ಯಾವ ಉತ್ತರ ನೀಡಿದನೋ ಗೊತ್ತಿಲ್ಲ. ಆದರೆ ಆತನ ಸಾವು ಮಾತ್ರ ಅಂತಃಕಲಹಕ್ಕೆ ನಾಂದಿ ಹಾಡಿತು.
ಗ್ರೀಕ್ ಇತಿಹಾಸಕಾರ ಪೋಟಾರ್ಕ್ ದಾಖಲಿಸಿರುವ ಹಾಗೆ ಅಲೆಗ್ಸಾಂಡರ್ ಕ್ರಿಪೂ 323ರಲ್ಲಿ ನಿಧನ ಹೊಂದಿದನು.
ಅದಕ್ಕೂ ಮೊದಲು ತನ್ನ ದಂಡಾಧಿಕಾರಿಗೆ ತನ್ನ ಉತ್ತರಾಧಿಕಾರವನ್ನು ನೀಡಿದ್ದನು. ಅಲ್ಲದೇ, ತನ್ನ ಮಗ
4ನೇ ಅಲೆಗ್ಸಾಂಡರ್ಗೆ ತನ್ನ ಅಧಿಕಾರವನ್ನು ನೀಡಬೇಕೆಂದು ತೀರ್ಮಾನಿಸಿದ್ದರು.
ಆದರೆ ಅಲೆಕ್ಸ್ ನ ತಮ್ಮ 3ನೇ ಫಿಲಿಪ್ ರಾಜ ಆಗಬೇಕೆಂದು ಕೆಲವರು
ತಗಾಧೆ ತೆಗೆಯುತ್ತಾರೆ. ನಂತರ 3ನೇ ಫಿಲಪ್ ಮತ್ತು 4ನೇ ಅಲೆಕ್ಸ್ ಇಬ್ಬರನ್ನು ಜಂಟಿಯಾಗಿ ಅರಸರನ್ನಾಗಿ
ಮಾಡಲು ನಿರ್ಧಾರಕ್ಕೆ ಬರಲಾಗುತ್ತದೆ. ಕೆಲವೇ ದಿನಗಳ ನಂತರ ಅಲೆಕ್ಸ್ ನ ದಂಡನಾಯಕರು ಅಧಿಕಾರಕ್ಕಾಗಿ
ಕಿತ್ತಾಟ ಮಾಡಲು ಪ್ರಾರಂಭಿಸುತ್ತಾರೆ. ಪೆಡ್ರಿಕಸ್ ಕೂಸ ಕೊಲೆಯಾಗಿ ಹೋಗುತ್ತಾನೆ.
ಇದಾದ ನಂತರ 3ನೇ ಫಿಲಿಪ್ ಮತ್ತು 4ನೇ ಅಲೆಗ್ಸಾಂಡರ್ ಕೂಡ
ಕೊಲೆಯಾಗಿ ಹೋಗುತ್ತಾರೆ. ಅಲೆಗ್ಸಾಂಡರ್ ನ ಸಾವಿನ ನಂತರ ಮೆಸಿಡೋನ್ ಸಾಮ್ರಾಜ್ಯವನ್ನು ತಲೆತಲೆ ಮಾರುಗಳಿಂದ
ಆಳ್ವಿಕೆ ಮಾಡಿಕೊಂಡು ಬಂದ ಸಾಮ್ರಾಜ್ಯ ಅಲೆಗ್ಸಾಂಡರ್ ನಂತರ ಸಂಪೂರ್ಣವಾಗಿ ನಾಶವಾಗುತ್ತದೆ. ಅಲೆಗ್ಸಾಂಡರ್
ಗೆದ್ದ ಪ್ರದೇಶಗಳನ್ನು ಅವನ ದಂಡನಾಯಕರು ಹಂಚಿಕೊಂಡು ಆಳ್ವಿಕೆ ಮಾಡಲು ಪ್ರಾರಂಭಿಸುತ್ತಾರೆ. ಕ್ರಿಪೂ
309ರ ವೇಳೆಗೆ ಅಲೆಗ್ಸಾಂಡರ್ ಕುಟುಂಬದ ಎಲ್ಲಾ ಸದಸ್ಯರು ಕೊಲೆಯಾಗಿ ಹೋಗುತ್ತಾರೆ. ಇದಾದ ನಂತರ 2
ದಶಕಗಳ ನಂತರ ಅಲೆಗ್ಸಾಂಡರ್ ಉತ್ತರಾಧಿಕಾರಿಗಾಗಿ ನಡೆದ ಅಂತಃಕಲಹದಿಂದಾಗಿ ಇಡೀ ಸಾಮ್ರಾಜ್ಯವೇ ನಾಶವಾಗಿ
ಹೋಗುತ್ತದೆ.