ಅದ್ಧೂರಿ – 2 ಮೂವಿಗೆ ಫಿಕ್ಸ್ ಆದ್ರೂ ಹೀರೋಯಿನ್ !

0
188

ಅದ್ಧೂರಿ, 2012 ರಲ್ಲಿ ತೆರೆಕಂಡ ಕನ್ನಡದ ರೊಮ್ಯಾಂಟಿಕ್ ಚಿತ್ರ, ರಾಧಿಕಾ ಪಂಡಿತ್ ಮುಖ್ಯಪಾತ್ರದಲ್ಲಿ ನಟಿಸಿರುವ ಅದ್ಧೂರಿಗೆ ಧ್ರುವ ಸರ್ಜಾ ಅವರು ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದರು ..ಇನ್ನು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಅಂಬಾರಿ ಖ್ಯಾತಿಯ ಎ.ಪಿ ಅರ್ಜುನ್.. ಚಿತ್ರದ ಸಂಭಾಷಣೆಗಳು ಸಖತ್ ಮಜವಾಗಿದ್ದವು ..ಇನ್ನು ವಿ ಹರಿಕೃಷ್ಣರ ಸಂಗೀತ ಮೋಡಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿತ್ತು..
ಅದ್ಧೂರಿ 2012 ರ ಬ್ಲಾಕ್ ಬಸ್ಟರ್ ಸಿನಿಮಾ!!

ಏಳು ವರ್ಷಗಳ ಬಳಿಕ ಅದ್ಧೂರಿ-2 ಸೆಟ್ಟೇರಿದೆ..
ಈ ಬಾರಿ ಧ್ರುವ ಸರ್ಜಾರ ಬದಲಿಗೆ ರಿಯಲ್ ಸ್ಟಾರ್ ಉಪೇಂದ್ರ ರ ಸಹೋದರನ ಮಗ ನಿರಂಜನ್ ಅದ್ಧೂರಿ -2 ನಲ್ಲಿ ಅಭಿನಯಿಸುವ ಮುಖಾಂತರ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ !!

ಈಗಾಗಲೇ ಈ ಸಿನಿಮಾ ಶುರುವಾಗಿದ್ದು, ಚಿತ್ರಕ್ಕಾಗಿ ನಿರಂಜನ್ ಕೂಡಾ ಭರ್ಜರಿ ವರ್ಕೌಟ್ ನಡೆಸಿದ್ದರು.

ಅಂದಹಾಗೆ ‘ಅದ್ದೂರಿ-2’ ಚಿತ್ರಕ್ಕೆ ನಾಯಕಿಯಾಗಿ ಯಾರು ನಟಿಸುತ್ತಾರೆ ಎಂಬ ಕುತೂಹಲವಿತ್ತು. ಇದೀಗ ನಾಯಕಿಯಾಗಿ ಬಾಲಿವುಡ್ ಚೆಲುವೆ ಸಿಕ್ಕಿದ್ದಾಳೆ. ಹೌದು, ಈ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ ನ ನಟಿ ಕಂ ಮಾಡೆಲ್ ಝಾರಾ ಯಾಸ್ಮೀನ್ ಆಯ್ಕೆಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಹುಟ್ಟು ಹಾಕಿರುವ ಝಾರಾ, ಹಲವು ವಿಡಿಯೋ ಆಲ್ಬಂಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಅಲ್ಲದೆ, ಜಾಹೀರಾತುಗಳಲ್ಲೂ ಆಗಾಗ ಕಾಣಿಸಿಕೊಳ್ಳುತ್ತಾರೆ ಅವರು. ಗಾಯಕ ಫಲಕ್ ಶಬೀರ್ ಜೊತೆಗಿನ ‘ಏಕ್ ವಾರ್..’ ಗೀತೆ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.
ಇವರೀಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿರುವುದು ವಿಶೇಷ.

ಸದ್ಯ ‘ಅದ್ದೂರಿ-2’ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದ್ದು, ಆಗಸ್ಟ್ ನಲ್ಲಿ ಶೂಟಿಂಗ್ ಶುರುವಾಗುವ ನಿರೀಕ್ಷೆಯಿದೆ. ಇನ್ನು ಈ ಚಿತ್ರವು ಕನ್ನಡ ದೊಂದಿಗೆ ಹಿಂದಿ, ತೆಲುಗು, ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ಬರುವ ಪ್ಲ್ಯಾನ್ ಅನ್ನು ಚಿತ್ರತಂಡ ಮಾಡಿದೆ.

‘ಅದ್ದೂರಿ-2’ ಚಿತ್ರಕ್ಕೆ ರಮೇಶ್ ವೆಂಕಟೇಶ್ ಬಾಬು ನಿರ್ದೇಶನ ಮಾಡುತ್ತಿದ್ದು, ಶಂಕರ್ ಬಂಡವಾಳ ಹೂಡಿದ್ದಾರೆ.

LEAVE A REPLY

Please enter your comment!
Please enter your name here