ಅತಿಯಾಗಿ ಟೊಮೆಟೊ ಸೇವಿಸಿದರೆ ಏನು ಆಗುತ್ತೆ ಗೊತ್ತಾ ..?

0
252

ಟೊಮೆಟೋದಲ್ಲಿ ಇರುವ ಮೆಲಿಕ್ ಮತ್ತು ಸಿಟ್ರಿಕ್ ಆಮ್ಲವು ಅತಿಯಾಗಿ ಆಮ್ಲ ಉತ್ಪತ್ತಿ ಮಾಡುವುದು. ಇದರಿಂದ ಆಮ್ಲವು ಹಿಮ್ಮುಖವಾಗಿ ಹರಿಯುವುದು. ಜಠರ ಹಿಮ್ಮುಖ ಹರಿವು ರೋಗ(ಜಿಇಆರ್‌ ಡಿ)ದ ಸಮಸ್ಯೆಯಿರುವವರಿಗೆ ಇದು ಮತ್ತಷ್ಟು ಕೆಟ್ಟ ಪರಿಣಾಮ ಬೀರುವುದು.

೧) ಅತಿಯಾಗಿ ಟೊಮೆಟೊ ಸೇವಿಸಿದರೆ ಟೊಮೆಟೋದಲ್ಲಿರುವ ಸಲ್ಮೊನೆಲ್ಲಾ ಅಂಶದಿಂದ ಹೊಟ್ಟೆ ಉಬ್ಬರ, ಭೇದಿ ಉಂಟಾಗಬಹುದು.

೨)ಟೊಮೆಟೋದಲ್ಲಿ ಆಕ್ಸಲೇಟ್ ಗರಿಷ್ಠ ಮಟ್ಟದಲ್ಲಿದ್ದು, ಇದು ಕಿಡ್ನಿ ಕಲ್ಲುಗಳಿಗೆ ಕಾರಣವಾಗಬಹುದು.

೩)ಟೊಮೆಟೋ ಸೂಪ್ ಅಥವಾ ಟೊಮೆಟೋ ಕೆಚಪ್ ಇತ್ಯಾದಿ ಸೇವನೆ ಮಾಡಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುವುದು. ಇದು ರಕ್ತದೊತ್ತಡ ಮೇಲೆ ಪರಿಣಾಮ ಬೀರುತ್ತದೆ.

೪)ಅಧ್ಯಯನ ಪ್ರಕಾರ ಟೊಮೆಟೋದಲ್ಲಿರುವ ಲೈಕೊಪೆನೆ ಅಂಶವು ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಸಾಧ್ಯತೆ ಹೆಚ್ಚಿಸುವುದು.

೫)ಆಮ್ಲೀಯ ಗುಣ ಹೊಂದಿರುವಂತಹ ಟೊಮೆಟೋ ಮೂತ್ರನಾಳದ ಕಿರಿಕಿರಿಗೆ ಕಾರಣವಾಗುವುದು

೬)ಅತಿಯಾಗಿ ಟೊಮೆಟೋ ಸೇವನೆ ಮಾಡಿದರೆ ಅದರಿಂದ ಸಂಧಿವಾತ ಉಂಟಾಗಬಹುದು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಬಹುದು.

೭)ಮೈಗ್ರೇನ್ ತಜ್ಞರ ಪ್ರಕಾರ ಟೊಮೆಟೋದಿಂದ ಮೈಗ್ರೇನ್ ಉಂಟಾಗಬಹುದು

೮)ಟೊಮೆಟೋದಲ್ಲಿ ಗ್ಲೈಸೆಮಿಕ್ ಅಂಶವು ಕಡಿಮೆ ಇರುವ ಕಾರಣದಿಂದಾಗಿ ಅದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಆದರೆ ಅತಿಯಾದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಮತ್ತಷ್ಟು ಕುಸಿಯಬಹುದು. ಇದರಿಂದ ದೃಷ್ಟಿ ಮಂದ, ಎದೆಯುರಿ, ಆಯಾಸ, ಬೆವರುವಿಕೆ ಇತ್ಯಾದಿ ಉಂಟಾಗಬಹುದು.

LEAVE A REPLY

Please enter your comment!
Please enter your name here