ಅಚ್ಚರಿಯಾದ್ರು ಇದು ಸತ್ಯ. ಭಾರತದ ಯುವ ಸ್ಪಿನ್ ಬೌಲರ್ ಮೇಲೆ ಈಗ ಎಲ್ಲರ ಚಿತ್ತನೆಟ್ಟಿದೆ. ಆತನ ವೈಶಿಷ್ಟ್ಯತೆ ಎಂದರೆ ಆತ ಏಳು ರೀತಿಯ ಸ್ಪಿನ್ ಮಾಡಬಲ್ಲ. ಹೌದು, ಐಪಿಎಲ್ 2019ರ ಆವೃತ್ತಿಯಲ್ಲಿ ಯಾರೂ ಊಹಿಸದ ರೀತಿ ದಾಖಲೆಯ ಮೊತ್ತಕ್ಕೆ ಬಿಕರಿಯಾದ ವರುಣ್ ಚಕ್ರವರ್ತಿಯೇ ಆ ಮೋಡಿಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 8.4 ಕೋಟಿಗೆ ಚಕ್ರವರ್ತಿಯನ್ನು ಖರೀದಿ ಮಾಡಿದಾಗ ಯಾರಪ್ಪಾ ಈ ಹುಡುಗ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಹಾಗೇ ಆತನಲ್ಲಿರುವ ಅಸಾಧಾರಣ ಪ್ರತಿಭೆ ಏನೆಂಬುದು ಎಲ್ಲರ ಕುತೂಹಲವಾಗಿತ್ತು. ಆದರೆ, ಈತ 7 ರೀತಿಯ ಸ್ಪಿನ್ ಮಾಡಬಲ್ಲ ಎಂಬುದೇ ಒಂದು ಆಸಕ್ತಿದಾಯಕ ವಿಷಯ. ವರುಣ್ ಮೈದಾನದಲ್ಲಿ ಬೌಲಿಂಗ್ ಮಾಡಲು ಇಳಿದರೆ ಆಫ್ಬ್ರೇಕ್, ಲೆಗ್ಬ್ರೇಕ್, ಗೂಗ್ಲಿ, ಕೇರಮ್ ಮುಂತಾದ ವೆರೈಟಿ ಬಾಲ್ಗಳನ್ನು ಹಾಕಿ ಬ್ಯಾಟ್ಸ್ಮನ್ಗಳನ್ನು ಕಂಗಾಲು ಮಾಡುತ್ತಾನೆ. ಹೀಗಾಗಿಯೇ ಈ ಯುವ ಪ್ರತಿಭೆಯ ಮೇಲೆ ಐಪಿಎಲ್ ಕ್ರಿಕೇಟ್ ಪ್ರಿಯರ ಕಣ್ಣು ನೆಟ್ಟಿದೆ.