ಆಫೀಸಿನಲ್ಲಿ ಮಂಚ ನೋಡಿ ಭಯವಾಗಿ ಅಲ್ಲಿಂದ ಓಡೋಡಿ ಬಂದೆ: ಉಜ್ಡಾ ಚಮನ್ ನಟಿ ಮಾನ್ವಿ

0
241
Loading...

ಹೊಸ ಪ್ರತಿಭೆಗಳು ಯಾವುದೇ ಒಂದು ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳಬೇಕು ಎಂದಾದಲ್ಲಿ ಮೊದಲು ಆಡಿಶನ್‍ನಲ್ಲಿ ಭಾಗವಹಿಸಬೇಕು. ಒಂದು ವೇಳೆ ಆಡಿಶನ್‍ನಲ್ಲಿ ಅವರು ಟ್ಯಾಲೆಂಟೆಡ್ ಅಂತ ಸಾಬೀತು ಮಾಡಿದ್ರೆ ಅವರ ಕನಸು ನನಸಾದಂತೆ.

ಆದರೆ ಎಷ್ಟೋ ಬಾರಿ ಕೆಲವು ನಟ-ನಟಿಯರು ಆಡಿಶನ್‍ಗೆ ಹೋದಾಗ ಅಲ್ಲಿ ಅವರಿಗೆ ಕೆಲವೊಂದು ಕೆಟ್ಟ ಅನುಭವಗಳಾಗುತ್ತವೆ. ಇತ್ತೀಚೆಗೆ ಬಾಲಿವುಡ್‍ನಲ್ಲಿ ‘ಉಜ್ಡಾ ಚಮನ್’ ಎಂಬ ಸಿನಿಮಾ ಬಿಡುಗಡೆಯಾಯಿತು. ಇದು ಕನ್ನಡದ ‘ಒಂದು ಮೊಟ್ಟೆ ಕಥೆ’ ಸಿನಿಮಾದ ರೀಮೇಕ್. ನಿಜ ಜೀವನದಲ್ಲಿ ಸ್ಲಿಮ್ ಇರುವ ನಟಿ ಮಾನ್ವಿ ಗಾಗ್ರೂ ಈ ಚಿತ್ರದಲ್ಲಿ ತೂಕ ಹೆಚ್ಚಾಗಿರುವ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮಾನ್ವಿ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಸಿನಿಮಾದಲ್ಲಿ ನಟಿಸುವ ಮುನ್ನ ಆಡಿಶನ್‍ಗಳಿಗೆ ಹೋದಾಗ ಅಲ್ಲಿ ತಮಗೆ ಉಂಟಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ.

‘ಒಂದು ಸಿನಿಮಾದಲ್ಲಿ ನಟಿಸಲು ನನಗೆ ಆಫರ್ ಬಂತು. ಆದರೆ ಆಡಿಷನ್‍ಗೆ ಹೋದಾಗ ಆ ಆಫೀಸಿನಲ್ಲಿದ್ದ ಇಬ್ಬರು ನನ್ನನ್ನು ರೇಪ್ ಸೀನ್ ಆಡಿಶನ್‍ನಲ್ಲಿ ನಟಿಸುವಂತೆ ಹೇಳಿದರು. ಇಬ್ಬರು ಪುರುಷರು ಬಿಟ್ಟರೆ ಅಲ್ಲಿ ಮತ್ತಾರೂ ಇರಲಿಲ್ಲ. ಆದರೆ ಅಲ್ಲಿನ ವಾತಾವರಣ ನೋಡಿ ನಾನು ಬದುಕಿದೆಯಾ ಬಡಜೀವವೇ ಎಂಬಂತೆ ಅಲ್ಲಿಂದ ಓಡಿ ಬಂದೆ. ಅದನ್ನು ಕಚೇರಿ ಎಂದು ಹೇಳಿಕೊಳ್ಳುತ್ತಾರೆ.

ಆದರೆ ಅಲ್ಲಿ ಮಂಚ ಕೂಡಾ ಇತ್ತು. ಇದು ನನಗೆ ನಿಜಕ್ಕೂ ವಿಚಿತ್ರ ಎನಿಸಿತು. ಆದರೂ ಬುದ್ಧಿ ಉಪಯೋಗಿಸಿ ಭಯದಿಂದಲೇ ನಾನು ಅಲ್ಲಿಂದ ತಪ್ಪಿಸಿಕೊಂಡೆ’ ಎಂದು ಮಾನ್ವಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬಣ್ಣದ ಲೋಕದಲ್ಲಿ ಎಷ್ಟೋ ನಟಿಯರಿಗೆ ಇಂತಹ ಅನುಭವಗಳಾಗಿರುವುದನ್ನು ಗಮನಿಸಬಹುದು.

Loading...

LEAVE A REPLY

Please enter your comment!
Please enter your name here