ನಮ್ಮ ಚಪ್ಪಲಿಯಲ್ಲಿ ನಾವೇ ಹೊಡೆದುಕೊಳ್ಳಬೇಕು : ಶಂಕರ್ ಬಿದರಿ.!

0
138
Loading...

ಇಂದು ಬೆಂಗಳೂರಿನಲ್ಲಿ ನೆರೆ ಸಂತ್ರಸ್ತರಿಗೆ ಉಂಟಾಗಿರುವ ಅನ್ಯಾಯ ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ‍ಅವರು ‘ಇಂಥವರನ್ನು ಸಂಸದರಾಗಿ ಆಯ್ಕೆ ಮಾಡಿದ್ದೇವಲ್ಲ ನಮ್ಮ ಚಪ್ಪಲಿಯಲ್ಲಿ ನಾವೇ ಹೊಡೆದುಕೊಳ್ಳುವುದು ಉತ್ತಮ’ ಎಂದು ಹೇಳುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರವಾಹ ಸಂತ್ರಸ್ತರಿಗೆ ಯಾವ ರೀತಿಯಲ್ಲೂ ಪರಿಹಾರ ನೀಡದ ಸರಕಾರ ಹಾಗೂ ಸಂಸದರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ ಶಂಕರ್ ಬಿದರಿ ಅವರು ಇಂದು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಂಟಾದ ಪ್ರವಾಹದಿಂದ ಅನೇಕ ನೆರೆ ಸಂತ್ರಸ್ತರಿಗೆ ಇಂದಿಗೂ ಯಾವ ರೀತಿಯಲ್ಲೂ ಮೂಲಸೌಕರ್ಯಗಳು, ಸೌಲಭ್ಯಗಳು, ಪರಿಹಾರ ದೊರೆತಿಲ್ಲ ಅವರಿಗೆ ಆಗಿರುವ ಅನ್ಯಾಯ ಖಂಡಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಶಂಕರ್ ಬಿದರಿಯವರು ಪ್ರವಾಹ ಉಂಟಾಗಿ ಇವತ್ತಿಗೆ ಎರಡು ತಿಂಗಳಿಗೂ ಹೆಚ್ಚು ಸಮಯವಾದರೂ ಕೇಂದ್ರದಿಂದ ಯಾವುದೇ ಸೂಕ್ತ ಪರಿಹಾರ ಒದಗಿ ಬಂದಿಲ್ಲ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಕಿಡಿಕಾರಿದರು. ನಾವು ಹೀಗೆ ಮಾಡಿದ್ದೀವಿ, ಹಾಗೆ ಮಾಡಲಿದ್ದೇವೆ ಎಂದು ಹೇಳಿ ಜನರ ಮೇಲೆ ಟೋಪಿ ಕೂರಿಸುವ ಸಂಸದರು ಏನು ಮಾಡುತ್ತಿದ್ದಾರೆ.? ಎಲ್ಲಿ ಹೋಗಿದ್ದಾರೆ.? ಇವರಿಂದ ಯಾವ ರೀತಿಯ ಸಹಾಯ ದೊರೆಯದ ಮೇಲೆ ಇವರನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪು.

ಇಂಥವರನ್ನು ಆಯ್ಕೆ ಮಾಡಿದ ತಪ್ಪಿಗೆ ನಮ್ಮ ಚಪ್ಪಲಿ ತೆಗೆದುಕೊಂಡು ನಾವೇ ಹೊಡೆದುಕೊಳ್ಳುವುದು ಬಹಳ ಉತ್ತಮ ಎಂದು ರಾಜ್ಯದ ಸಂಸದರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಉತ್ತರ ಕರ್ನಾಟಕ ಹಿಂದೆಂದೂ ಈ ರೀತಿಯ ಪ್ರವಾಹವನ್ನು ನೋಡಿರಲಿಲ್ಲ, ಇದೇ ಪ್ರಥಮ ಬಾರಿಗೆ ಉತ್ತರ ಕರ್ನಾಟಕ ಸಂಪೂರ್ಣವಾಗಿ ನಲುಗಿ ಹೋಯಿತು. ಜನರು ಮನೆ, ಮಠ,ಆಸ್ತಿ- ಪಾಸ್ತಿ ಕಳೆದುಕೊಂಡು ತಿನ್ನಲು ಊಟವಿಲ್ಲದೆ, ಇರಲು ಮನೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರಿಗೆ ಮಾದರಿಯಾಗಬೇಕಿದ್ದ ಸಂಸದರು ಹಾಗೂ ರಾಜಕಾರಣಿ ವ್ಯಕ್ತಿಗಳೇ ಈ ರೀತಿಯಾದರೆ ಸಮಾಜಕ್ಕೆ ಯಾವ ಸಂದೇಶವನ್ನು ಇವರು ರವಾನೆ ಮಾಡುತ್ತಾರೆ ಎಂದು ಹೇಳಿದರು.

Loading...

LEAVE A REPLY

Please enter your comment!
Please enter your name here