ನನ್ನ ಮಗನಿಗೆ ಪಂಚಮಸಾಲಿ ಕನ್ಯೆ ಇದ್ರೆ ನೋಡಿ ಮದುವೆ ಮಾಡಬೇಕು : ಲಕ್ಷ್ಮಿ ಹೆಬ್ಬಾಳ್ಕರ್.!

0
199
Loading...

ಬೆಳಗಾವಿ ಜಿಲ್ಲೆಯ ಖಡಕ್ ಮಹಿಳಾ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಮಗನ ಮದುವೆ ಮಾಡಲು ಕೆಲ ವಿಚಾರಗಳನ್ನು ಜನರ ಮುಂದೆ ಬಹಿರಂಗ ಪಡಿಸಿದ್ದಾರೆ. ಹೌದು, ಇತ್ತೀಚಿಗೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ಬಸವೇಶ್ವರ ಕಾರ್ತಿಕೋತ್ಸವದಲ್ಲಿ ಅಥಿತಿಯಾಗಿ ಭೇಟಿ ನೀಡುವ ಮೂಲಕ ಪಾಲ್ಗೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಏಕಾಏಕಿ ತಮ್ಮ ಮಗನ ವಿಚಾರವನ್ನು ಪ್ರಸ್ತಾಪ ಪಡಿಸಿದ್ದಾರೆ.

 

 

ನನ್ನ ಮಗನ ಮದುವೆ ಮಾಡಲು ಯಾರದರೂ ಪಂಚಮಸಾಲಿ ಹುಡುಗಿ ಇದ್ದರೆ ನೋಡ್ರಪ್ಪ ಎಂದು ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಹೇಳಿದ್ದಾರೆ. ಜೊತೆಗೆ ನನಗೂ ಕೂಡ ನನ್ನ ಮಗನ ಮದುವೆಯನ್ನು ಬೆಂಗಳೂರು ಅರಮನೆಯಲ್ಲಿ ಮಾಡಬೇಕು ಎಂಬ ಆಸೆ ದೊಡ್ಡದಾಗಿ ಇದೆ ಎಂದು ನೆರದಿದ್ದವರ ಬಳಿ ಹೇಳಿಕೊಂಡರು.

 

 

ಈ ವೇಳೆ ಮತ್ತಷ್ಟು ಧೀರ್ಘವಾಗಿ ಈ ವಿಚಾರವನ್ನು ಕೆದಕಿದ ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಪುತ್ರನ ಮದುವೆಯನ್ನು ಬೆಂಗಳೂರು ಪ್ಯಾಲೇಸ್ ನಲ್ಲಿ ಮಾಡಬೇಕು ಎಂಬ ಕನಸ್ಸನ್ನು ಇಟ್ಟುಕೊಂಡಿದ್ದೇನೆ. ನನ್ನ ಮಗ ಇಂಜಿನಿಯರ್ ವಿದ್ಯಾಭ್ಯಾಸ ಮಾಡಿ ಮುಗಿಸಿ ಹುದ್ದೆಯಲ್ಲಿದ್ದಾನೆ, ಪಂಚಮಸಾಲಿ ಯುವತಿಯನ್ನು ನೋಡ್ರಪ್ಪಾ ಒಂದು ಚೂರ್ ಎಂದು ಕೇಳಿದರು. ನನಗೆ ಒಬ್ಬನೇ ಪುತ್ರ, ಸಮಾಜಕ್ಕಾಗಿ ನಾನು ನನ್ನ ಪುತ್ರನನ್ನು ತ್ಯಾಗ ಮಾಡುವುದಿಲ್ಲ.

 

 

ರಾಜಕಾರಣಿಗಳು ಸದಾ ಮುಖವಾಡ ಧರಿಸಿ ಜೀವನ ನಡೆಸುತ್ತಾರೆ. ಆದರೆ ಸ್ವಾಮಿಗಳು ಆ ರೀತಿ ಇರುವುದಿಲ್ಲ ಅವರು ಯಾವ ರೀತಿಯ ಮುಖವಾಡ ಧರಿಸುವುದಿಲ್ಲ. ಸಮಾಜಕ್ಕಾಗಿ ತ್ಯಾಗ ಮಾಡಿ, ನಿಸ್ವಾರ್ಥ ಸೇವೆಯನ್ನು ಮಾಡುತ್ತಾರೆ ಎಂದು ಹೇಳುವ ಮೂಲಕ ತಮ್ಮ ಮಗನ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

Loading...

LEAVE A REPLY

Please enter your comment!
Please enter your name here