ಪೊಲೀಸರು ದಂಡ ವಿಧಿಸಿದ್ದಕ್ಕೆ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

0
428
Loading...

ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸರು ವಾಹನ ಸವಾರರಿಗೆ ನಡುಕ ಹುಟ್ಟಿಸುವುದು ಫೈನ್ ನೀಡುವ ಮೂಲಕ. ಬೈಕ್ ಸವಾರರು ಹೆಚ್ಚಾಗಿ ರಸ್ತೆ ಸಂಚಾರ ನಿಯಮವನ್ನು ಉಲ್ಲಂಘಿಸಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಮಾಡುತ್ತಾರೆ. ಇನ್ನೂ ವಿಚಿತ್ರ ಎಂದರೆ ಕೆಲವರು ಪೊಲೀಸರಿಂದ ಹಾಗೂ ಅವರು ಹಾಕುವ ದೊಡ್ಡ ಮೊತ್ತದ ದಂಡದಿಂದ ಪಾರಾಗಲು ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಂದಿಗೊಂದಿಯಲ್ಲಿ ನುಗ್ಗಿಸಿ ಪ್ರಾಣವನ್ನು ಲೆಕ್ಕಿಸದೆ ಚಲಾಯಿಸಿ ಎಸ್ಕೇಪ್ ಆಗುತ್ತಾರೆ. ಇಂಥ ಹಲವು ಪ್ರಸಂಗಗಳು ನಡೆದಿರುವುದು, ನಡೆಯುತ್ತಿರುವುದು ಸಾಮಾನ್ಯ ಎನ್ನಬಹುದು.

 

 

ಆದರೆ ಇಲ್ಲೊಬ್ಬ ಬೈಕ್ ಸವಾರ ಪೊಲೀಸರ ಕೈಗೆ ಸಿಕ್ಕ ಪರಿಣಾಮ ಪೊಲೀಸರು ಆತನಿಗೆ ದಂಡವನ್ನು ಹೇರಿದ್ದಾರೆ. ಪೊಲೀಸರು ದಂಡ ವಿಧಿಸಿದ್ದಕ್ಕೆ ಬೈಕ್ ಸವಾರ ಕೋಪಗೊಂಡು ಬೈಕ್ ಎಸೆದು ಅಳುತ್ತಾ ಕುಳಿತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಬೈಕ್ ಸವಾರ ಹೆಲ್ಮೆಟ್ ಧರಿಸದೇ ಚಲಾಯಿಸಿಕೊಂಡು ಬಂದಿದ್ದಾನೆ. ಹೆಲ್ಮೆಟ್ ರಹಿತ ಚಾಲನೆಯನ್ನು ಕಂಡು ಪೊಲೀಸರು ಹಿಡಿದು ಫೈನ್ ಹಾಕಿದ್ದಾರೆ. ಇದಕ್ಕೆ ಕೋಪಗೊಂಡ ಆತ ಬೈಕ್ ಎಸೆದು ಅದರ ಮೇಲೆ ಕುಳಿತು ಕಣ್ಣೀರು ಹಾಕಿದ್ದಾನೆ.

 

 

ಯುವಕ ಅಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬೈಕ್ ತಳ್ಳಿ ಹೋದ ಯುವಕನನ್ನು ಸ್ಥಳದಲ್ಲಿದ್ದ ಪೊಲೀಸರು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಈ ಕುರಿತು ಮೀರತ್ನ ಪಿಯುಷ್ ರೈ ಎಂಬ ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು, ಬೈಕ್ ಸವಾರ ಕೋಪಗೊಂಡು ಬೈಕ್ ಮೇಲೆ ಕುಳಿತು ಅಳುತ್ತಿದ್ದಾನೆ. ಪೊಲೀಸರು ಈ ಡ್ರಾಮವನ್ನು ನಿಂತುಕೊಂಡು ನೋಡುತ್ತಿದ್ದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

 

ಈ ವಿಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಮತ್ತು ಯುವಕ ಇಬ್ಬರ ಪರವೂ ಕಮೆಂಟ್ ಮಾಡಿದ್ದಾರೆ. ಕೆಲವರು ಅರುವತ್ತು ಸಾವಿರ ರೂಪಾಯಿ ಕೊಟ್ಟು ಬೈಕ್ ತೆಗೆದುಕೊಳ್ಳುವುದಕ್ಕೆ ಆಗುತ್ತದೆ. ಆರುನೂರು ರೂಪಾಯಿ ಕೊಟ್ಟು ಹೆಲ್ಮೆಟ್ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರೆ.

 

 

ಇನ್ನೂ ಕೆಲವರು ಪೊಲೀಸರಿಗೂ ಮಾಡಲು ಕೆಲಸವಿಲ್ಲ.! ಹಾಗಾಗಿ ಮನಬಂದಂತೆ ಎಲ್ಲೆಂದರಲ್ಲಿ ನಿಂತು ದಂಡವನ್ನು ಹೆರಿಸಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಾರೆ ಎಂದು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರು ಹಾಕಿದ ದಂಡಕ್ಕೆ ಯುವಕ ಈ ರೀತಿ ವರ್ತಿಸಿರುವುದು ಸ್ವಲ್ಪ ವಿಚಿತ್ರ ಅನಿಸುತ್ತದೆ.

Loading...

LEAVE A REPLY

Please enter your comment!
Please enter your name here