ಚೈತ್ರಾ ಕೋಟೂರ್ ಜೊತೆ ಸೊಪ್ಪು ಮಾರುವವನ ಮದುವೆಯ ಅಸಲಿ ಕಥೆ ಏನು?

0
144
Loading...

ಚೈತ್ರಾ ಕೋಟೂರು, ಕನ್ನಡ ಚಿತ್ರರಂಗದ ನಟಿ ಮತ್ತು ಬರಹಗಾರ್ತಿ. ಮಂಗಳೂರು ನಗರದ ಬಳಿ ಇರುವ ಒಂದು ಚಿಕ್ಕ ಹಳ್ಳಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಚೈತ್ರಾ, ಬಾಲ್ಯದಿಂದಲೂ ಕಥೆಗಳನ್ನು ಬರೆಯುವಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಆದುದರಿಂದ ಕಾಲೇಜು ದಿನಗಳ ಸಮಯದಲ್ಲಿ ಕಾಲ್ಪನಿಕ ಕಥೆಗಳನ್ನು ಬರೆಯುವುದು ಮತ್ತು ಚಲನಚಿತ್ರಗಳಿಗೆ ಸ್ಕ್ರಿಪ್ಟ್ ಗಳನ್ನು ತಯಾರಿಸಿ, ಕಾಲೀಜಿನಲ್ಲಿ ಜನಪ್ರಿಯರಾಗಿದ್ದರು.

 

 

ತಮ್ಮ ಪದವಿ ಮುಗಿದ ನಂತರ ಬೆಂಗಳೂರಿನಲ್ಲಿ ನೆಲೆಸಿದ ಚೈತ್ರ, ಕನ್ನಡ ಮೂಲದ ಕಥೆಗಾರರ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಟಿ.ವಿ ಧಾರಾವಾಹಿಗಾಗಿ ಗಮನಾರ್ಹ ಚಿತ್ರ ಕಥೆಗಾರನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 2019 ರಲ್ಲಿ ಚೈತ್ರಾ, ಸೂಜಿದಾರ ಚಿತ್ರದಲ್ಲಿ ನಟನೆಗೆ ಪಾದರ್ಪಣೆ ಮಾಡಿದರು, ಅಲ್ಲದೇ ಹಲವಾರು ಚಿತ್ರಗಳಿಗೆ ಗೀತರಚನೆಕಾರರಾಗಿಯೂ ಕೆಲಸ ಮಾಡಿದ್ದಾರೆ ಮತ್ತು ಕ್ರೀಯಾಶೀಲತೆಯ ನಿರ್ದೇಶಕಿಯೂ ಹೌದು.

 

 

ಸೂಜಿದಾರ ಚಿತ್ರದಲ್ಲಿ ಅಭಿನಯಿಸಿದ ನಂತರ, ದೂರದರ್ಶನ ಧಾರಾವಾಹಿಯಲ್ಲಿ ಕೆಲಸ ಮಾಡಲು ಸಾಕಷ್ಟು ಕರೆಗಳು ಬಂದವಂತೆ ಆದರೆ ದಕ್ಷಿಣ ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಯೋಜನೆಗೆ ಸಹಿ ಹಾಕಿದ್ದರಿಂದ ದೂರದರ್ಶನದೊಂದಿಗೆ ಕೆಲಸ ಮಾಡುವುದನ್ನು ನಿರಾಕರಿಸಿದರು ಎಂದು ಹೇಳಲಾಗುತ್ತದೆ. ಬಿಗ್ ಬಾಸ್ ಅವೃತ್ತಿ 7 ರಲ್ಲಿ ಚೈತ್ರಾ ಕೋಟೂರ್ ಭಾಗವಹಿಸಿದರು. ಆದರೆ ಮನೆಯಿಂದ ನಾಲ್ಕನೇ ವಾರವೇ ಹೊರಬಂದಿರುವ ಚೈತ್ರಾ, ಇದೀಗ ದೊಡ್ಡ ಮನೆಯ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

 

 

ಬಿಗ್‍ಬಾಸ್ ಅವೃತ್ತಿ 7ರಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸ್ಫರ್ದಿಗಳಲ್ಲಿ ಚೈತ್ರಾ ಕೋಟೂರ್ ಅವರು ಕೂಡ ಒಬ್ಬರು, ಒಂದೆಡೆ ಚೆಲ್ಲಾಟ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದರೆ ಮತ್ತೊಂದೆಡೆ ವಿವಾದವನ್ನು ಸೃಷ್ಟಿಸುತ್ತಿದ್ದರು. ಅದರಲ್ಲೂ ಬಿಗ್‍ಬಾಸ್ ಮನೆಯಲ್ಲಿ ಹೇಳಿದ್ದ ತಮ್ಮ ಲವ್ ಸ್ಟೋರಿ ಬಗ್ಗೆ ವೀಕ್ಷಕರಲ್ಲಿ ತಲೆಗೆ ಹುಳ ಬಿಟ್ಟಂತೆ ಆಗಿತ್ತು. ‘ನನಗೆ ಮದುವೆಯಾಗಿ ಆಗಲೇ ಮೂರು ವರ್ಷಗಳಾಗಿದೆ, ನಾನು ಮದುವೆಯಾಗಿದ್ದು ಸೊಪ್ಪು ಮಾರುವ ಹುಡುಗನನ್ನು, ನಮ್ಮ ಮದುವೆ ಶಾಸ್ತ್ರೋಕ್ತವಾಗಿ ನಡೆದಿಲ್ಲ. ನಾವಿಬ್ಬರು ರಿಜಿಸ್ಟರ್ ಮದುವೆ ಮಾಡಿಕೊಂಡು, ದಾಂಪತ್ಯ ಜೀವನವನ್ನು ಪ್ರಾರಂಭಿಸಿದ್ದೇವೆ’ ಎಂದು ಹೇಳಿದ್ದರು.

 

 

ಯಾವಾಗಲು ನಾವು ವ್ಯಕ್ತಿತ್ವ ನೋಡಿ ವಿವಾಹವಾಗಬಾರದು. ತರಕಾರಿ ಮತ್ತು ಸೊಪ್ಪು ಮಾರುವವರಿಗೂ, ಓದಿದವರನ್ನು ಮದುವೆಯಾಗಬೇಕೆಂದು ಆಸೆ ಇರುತ್ತದೆ. ಹಾಗಾಗಿ ನಾನು ಅಂತವನನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಚೈತ್ರಾ ಹೇಳಿದ್ದರು. ಇನ್ನು ಈ ಲವ್ ಸ್ಟೋರಿಯನ್ನು ಕೇಳಿದ ಬಿಗ್ ಬಾಸ್ ನ ಇತರೆ ಸ್ಫರ್ದಿಗಳು ಇವಳು ಹೇಳುತ್ತಿರುವುದು ನಿಜಾನಾ? ಅಥವಾ ಸುಳ್ಳಾ? ಎಂಬುವ ಡೌಟ್ ಶುರುವಾಗಿತ್ತು. ಯಾಕೆಂದರೆ, ಚೈತ್ರಾ ಅವರಿಗೆ ಡಾಕ್ಟರ್ ಸೊಪ್ಪು ತಿನ್ನುವಂತೆ ಸೂಚಿಸಿದ್ದರಂತೆ. ಆದುದರಿಂದ ನಾನು ಸೊಪ್ಪು ಮಾರುವ ಹುಡುಗನ್ನೆ ಮದುವೆಯಾದೆ ಎಂದು ಹೇಳಿದ್ದರು.

 

 

ಆತ ಪ್ರತಿನಿತ್ಯ ಬೆಳಿಗ್ಗೆ 3 ಗಂಟೆಗೆ ಎಂದು ಮಾರುಕಟ್ಟೆಯಲ್ಲಿ ಸೊಪ್ಪು ಮಾರುತ್ತಾನೆ. ಪ್ರತಿ ಮುಂಜಾನೆಯೂ ಫ್ರೆಶ್ ಆಗಿರುವ ಸೊಪ್ಪು ತಂದು ಬೇಯಿಸಿ ನನಗೆ ತಿನ್ನಿಸುತ್ತಾನೆ ಎಂದು ಸ್ಫರ್ಧಿಗಳ ಸಮ್ಮುಖದಲ್ಲಿ ಹೇಳಿದ್ದರು. ಈ ಸ್ಟೋರಿಯನ್ನು ಕೇಳುತ್ತಿದ್ದಂತೆ ಶೈನ್ ಶೆಟ್ಟಿ ಮತ್ತು ಸುಜಾತಾ ಅವರಿಗೆ ಡೌಟ್ ಬಂದಿದೆ. ಅಲ್ಲದೇ ಹಲವು ಪ್ರಶ್ನೆಗಳನ್ನು ಚೈತ್ರಾ ಮುಂದಿಟ್ಟಿದ್ದರು.

 

 

4 ವರ್ಷಗಳ ಹಿಂದೆ ನಾನು ಅನುರಾಗ ಸಂಗಮ ಮತ್ತು ಸೌಭಾಗ್ಯವತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದೆ, ಇದೇ ಸಂದರ್ಭದಲ್ಲಿ ನಮ್ಮ ಮನೆ ಚೇಂಜ್ ಮಾಡಬೇಕಿತ್ತು. ಸಾಮಾಗ್ರಿಗಳನ್ನು ಶಿಫ್ಟ್ ಮಾಡಲು ಸೊಪ್ಪು ಮಾರುವವರು ಸಹಾಯ ಮಾಡಿದ್ದರು. ಈ ವೇಳೆ ನನಗೆ ತುಂಬಾನೆ ಸುಸ್ತಾಗಿತ್ತು. ನನ್ನನ್ನು ನೋಡಿ ಆತ ಜ್ಯೂಸ್ ತಂದುಕೊಟ್ಟಿದ್ದ. ಇದಾದ ಬಳಿಕ ಅವರನ್ನೇ ವಿವಾಹವಾದೆ. ನನ್ನ ಸುಸ್ತಿಗೆ ಕಾರಣ ರಕ್ತಹೀನತೆ. ಆದ ಕಾರಣ ನನ್ನ ಪತಿ ಮೂರು ವರ್ಷಗಳ ಕಾಲ ಪಾಲಕ್ ಸೊಪ್ಪನ್ನೇ ತಂದುಕೊಡುತ್ತಿದ್ದರು. ಆತನ ಮೇಲಿನ ಪ್ರೀತಿಯಿಂದ ನಾನದನ್ನು ತಿನ್ನುತ್ತಿದ್ದೆ ಎಂದು ಚೈತ್ರಾ ಹೇಳಿದ್ದರು.

 

 

ಆತನ ಹೆಸರು ರಾಜ್‍ಕುಮಾರ್ ಎಂದು ತಮ್ಮ ಲವ್ ಸ್ಟೋರಿ ಮತ್ತು ಮ್ಯಾರೇಜ್ ಸ್ಟೋರಿಯನ್ನು ಚೈತ್ರಾ ಬಿಚ್ಚಿಟ್ಟಿದ್ದರು. ಆದರೆ ಈ ಕಥೆಯನ್ನು ಕೇಳಿದ ಮನೆಯ ಸದಸ್ಯರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದನ್ನು ಕಟ್ಟುಕತೆ ಎಂದು ಮಾತಾನಾಡಿಕೊಳ್ಳುತ್ತಿದ್ದರು. ಹೀಗಾಗಿ ಚೈತ್ರಾ ಅವರ ಕಾಲೆಳೆಯುವ ಪ್ರಯತ್ನವನ್ನು ಕೂಡ ಮಾಡಿದ್ದರು. ಆದರೆ ಚೈತ್ರಾ ಮಾತ್ರ ಬಹಳ ಕಾನ್ಫಿಡೆಂಟ್ ಇಂದ ತಮ್ಮ ವೈಯಕ್ತಿಕ ಜೀವನದ ಕಥೆಯನ್ನು ಕ್ಯಾಮರಾ ಮುಂದೆ ತೆರೆದಿಟ್ಟಿದ್ದರು. ಇತ್ತ ವೀಕ್ಷಕರಲ್ಲೂ ಈಕೆ ಹೇಳುರುವ ಕಥೆ ನಿಜನಾ ಎಂಬುವ ಅನುಮಾನಗಳು ಹರಿದಾಡುತ್ತಿದ್ದವು. ಆದರೆ ಇದೀಗ ಚೈತ್ರಾ ಅವರು ದೊಡ್ಮನೇ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

 

 

ನಾನು ಬಿಗ್ ಬಾಸ್ ಮನೆಯಲ್ಲಿ ಮದುವೆಯಾಗಿದ್ದೇನೆ ಎಂದು ಹೇಳಿರುವುದು ನಿಜವಲ್ಲ, ಶೈನ್ ಶೆಟ್ಟಿ ಜೊತೆ ಸುಮ್ಮನೆ ಮದುವೆಯಾಗಿದೆ ಎಂದು ಹೇಳಿದೆ. ಮನರಂಜನಾ ದೃಷ್ಟಿಯಿಂದ ಶೈನ್ ಅವರನ್ನು ರೇಗಿಸಲು ಹೀಗೆ ಮಾಡಿದೆ, ನಾನೇಳಿದ ಲವ್ ಮತ್ತು ಮ್ಯಾರೇಜ್ ಸ್ಟೋರಿಗಳೆಲ್ಲಾ ಸುಳ್ಳು ಕಥೆಗಳು. ಮಾತನಾಡಲು ಏನೂ ಇಲ್ಲದಿದ್ದಾಗ ಈ ರೀತಿಯಾದ ಕಟ್ಟುಕಥೆಗಳನ್ನೇಳಿದೆ ಅಷ್ಟೆ. ನನಗೆ ಮದುವೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲಿಗೆ ಸೊಪ್ಪು ಮಾರುವವನ ಜೊತೆಗಿನ ಮದುವೆಯ ಸ್ಟೋರಿಯ ಅಸಲಿಯತ್ತು ಬಯಲಾಗಿದೆ!

Loading...

LEAVE A REPLY

Please enter your comment!
Please enter your name here