ಮತ್ತೆ ದೆವ್ವದ ಬೆನ್ನತ್ತಿದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್!

0
78
Loading...

ಆಪ್ತಮಿತ್ರ, ಆಪ್ತರಕ್ಷಕ, ಆರಕ್ಷಕ ಶಿವಲಿಂಗ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ನಿರ್ದೇಶಕ ಪಿ.ವಾಸು ಅವರು ಸದ್ದಿಲ್ಲದೆ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿಸಿ ಟೀಸರ್ ಸಹಿತ ಬಿಡುಗಡೆ ಮಾಡಿದ್ದಾರೆ ಪಿ.ವಾಸು ಅವರ ಸಿನಿಮಾಗಳೇ ಹಾಗೆ, ವಿಭಿನ್ನವಾದ ದೃಶ್ಯಾವಳಿಗಳು,ಬೆಚ್ಚಿ ಬೀಳಿಸುವಂತಹ ಸ್ಕ್ರೀನ್ ಪ್ಲೇ ಮತ್ತು ಪ್ರೇಕ್ಷಕರ ಮನಸ್ಸಿಗೆ ನಾಟುವಂತಹ ಭಾವನೆಗಳನ್ನು ಸಿನಿಮಾದಲ್ಲಿ ಅಳವಡಿಸಿರುತ್ತಾರೆ.

ಕನ್ನಡದ ಪ್ರತಿಷ್ಠಿತ ದ್ವಾರಕೀಶ್ ಚಿತ್ರ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ನಾಯಕನಟನಾಗಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಈಗಾಗಲೆ ಪಿ ವಾಸು ಮತ್ತು ಶಿವಣ್ಣ ಅವರ ಜೋಡಿಯಲ್ಲಿ ಮೂಡಿಬಂದ ಶಿವಲಿಂಗ ಸಿನಿಮಾ ಬಾಕ್ಸ್ ಆಫೀಸ್‌ ನಲ್ಲಿ ಧೂಳೆಬ್ಬೆಸಿತ್ತು. ಈಗ ಮತ್ತೊಂದು ಸಿನಿಮಾದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಮೊದಲು ಆನಂದ್ ಎಂಬುವ ಟೈಟಲ್ ಫಿಕ್ಸ್ ಮಾಡಿದ್ದರು,ಆದರೆ ಕೆಲವು ಕಾರಣದಿಂದ ಆನಂದ್ ಬದಲಿಗೆ ಆಯುಷ್ಮಾನ್ ಭವ ಎಂದು ಮರುನಾಮಕರಣ ಮಾಡಲಾಗಿದೆ.

ವಿಶೇಷವಾದ ಸಂಗತಿ ಏನೆಂದರೆ ಇದೇ ಮೊದಲ ಬಾರಿಗೆ ಶಿವಣ್ಣ ಅವರು ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಅಭಿನಯಿಸುತ್ತಿದ್ದಾರೆ. ಚೌಕ, ಅಮ್ಮಾ ಐ ಲವ್ ಯೂ ನಂತಹ ಸೂಪರ್ ಹಿಟ್ ಫ್ಯಾಮಿಲಿ ಸಿನಿಮಾಗಳನ್ನು ನೀಡಿದಂತಹ ದ್ವಾರಕೀಶ್ ಬ್ಯಾನರ್ , ಈಗ ಆಯುಷ್ಮಾನ್ ಭವ ಸಿನಿಮಾದ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಇನ್ನು ಶಿವಣ್ಣನ ಜೋಡಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ ಜೊತೆಗೆ ಪೋಷಕ ಪಾತ್ರದಲ್ಲಿ ಮೊಸ್ಟ್ ಎನರ್ಜೆಟಿಕ್ ಹೀರೋ ಅನಂತನಾಗ್ ಬಣ್ಣ ಹಚ್ಚಿದ್ದು ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಎಲ್ಲರ ನಿರೀಕ್ಷೆಯಂತೆ ‘ಆಯುಷ್ಮಾನ್ ಭವ’ ಚಿತ್ರದಲ್ಲೂ ಹಾರರ್ ಟಚ್ ಇರೋದು ಪಕ್ಕಾ ಆಗಿದೆ. ಸದ್ಯ ಆಯುಷ್ಮಾನ್ ಭವ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ. ಸಿನಿಮಾದಲ್ಲಿ ದೆವ್ವ ಇದೆ ಎನ್ನುವುದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಆದರೆ, ಯಾರ ದೇಹದ ಮೇಲೆ ದೆವ್ವ ಬರುತ್ತೆ, ಯಾರು ದೆವ್ವ ಎಂಬುದು ಗೌಪ್ಯವಾಗಿದೆ. ಶಿವಲಿಂಗ ಸಿನಿಮಾದ ಬಳಿಕ ಮತ್ತೆ ಶಿವರಾಜ್ ಕುಮಾರ್ ಅವರು ದೆವ್ವದ ಬೆನ್ನತ್ತಿ ಹೋಗಿರುವುದು ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದೆ. ಈಗಾಗಲೇ ಟೀಸರ್ ಶಿವಣ್ಣ ಅಭಿಮಾನಿಗಳಿಗೆ ಇಷ್ಟವಾಗಿದ್ದು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ನಿಮ್ಮ ಎಲ್ಲಾ ಸ್ನೇಹಿತರಿಗೂ ಪೇಜ್ ಲೈಕ್ ಮಾಡಲು ತಿಳಿಸಿ. ನಾವು ನೀಡುವ ಮಾಹಿತಿಗಳು ,ಲೇಖನಗಳು ಎಲ್ಲವೂ ಕಾಪಿರೈಟ್ಸ್ ಗೆ ಒಳಪಟ್ಟಿದ್ದು ಕದಿಯುವುದು,ಕಾಪಿ ಪೇಸ್ಟ್ ಅಥವಾ ಬೇರೆ ರೀತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ

Loading...

LEAVE A REPLY

Please enter your comment!
Please enter your name here