2019ರ ಬಹು ನಿರೀಕ್ಷಿತ ಚಿತ್ರ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಕೌಂಟ್’ಡೌನ್ ಶುರು

0
107
Loading...

2019ರ ಬಹು ನಿರೀಕ್ಷಿತ ಚಿತ್ರ ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಕೌಂಟ್’ಡೌನ್ ಶುರುವಾಗಿದೆ. ಕೆಜಿಎಪ್, ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳ ಬಳಿಕ ಬಿಗ್ ಬಜೆಟ್ ಚಿತ್ರವಾಗಿರುವ ಅವನೇ ಶ್ರೀಮನ್ನಾರಾಯಣ ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಕೆರಳಿಸಿದೆ.

ರಿಸೀಗ್’ಗೂ ನಮುನ್ನವೇ ಸಚಿವನ್ ರವಿ ನಿರ್ದೇಶಿಸಿರುವ ಈ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ನವೆಂಬರ್ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಣ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಚಿತ್ರ ತಂಡ ಅ.1ರಿಂದಲೇ ಅಧಿಕೃತವಾಗಿ ಚಿತ್ರಕ್ಕೆ ಪ್ರಮೋಷನ್ ನೀಡಲು ಆರಂಭಿಸಿದೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು, ಹಲವು ನಿರ್ಮಾಣ ಸಂಸ್ಥೆಗಳೊಂದಿಗೆ ಚಿತ್ರ ಹಂಚಿಕೆ ಕುರಿತಂತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.

ಚಿತ್ರದ ಇತರೆ ಭಾಷೆಗಳ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಈಗಾಗಲೇ ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಪೂರ್ಣಗೊಳಿಸಲಾಗಿದೆ. ತೆಲುಗಿನಲ್ಲಿ ಅರ್ಧ ಕೆಲಸ ಮುಗಿದೆ. ಹಿಂದಿ ಭಾಷೆಯಲ್ಲಿ ಈಗಷ್ಟೇ ಆರಂಭಿಸಲಾಗಿದೆ ಎಂದು ಪುಷ್ಕರ್ ಹೇಳಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

Loading...

LEAVE A REPLY

Please enter your comment!
Please enter your name here