ಅಭಿಷೇಕ್ ಅಂಬರೀಷ್ ಅಭಿಮಾನಿಗಳಿಗೆ ಹೇಳಿದ್ದಾದ್ರು ಏನು

0
100
Loading...

ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಇಲ್ಲಿವರೆಗೂ ಬರುವುದು ಬೇಡ. ಅಲ್ಲೆ ನಿಮ್ಮ ನಿಮ್ಮ ಊರಿನಲ್ಲಿಯೆ ಅಂಬರೀಶ್ ಹೆಸರಿನಲ್ಲಿ ಗಿಡ ನೆಟ್ಟು ಗೌರವ ಸಲ್ಲಿಸಿ:- ಅಭಿಷೇಕ್ ಅಂಬರೀಶ್ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ರವರ ಪುತ್ರರಾಗಿರುವ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಇಂದು ಜನುಮದಿನದ ಸಂಭ್ರಮದಲ್ಲಿದ್ದಾರೆ. ಇಂದು 26 ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಸಹ ಶುಭ ಹಾರೈಸಿದ್ದಾರೆ.

‘ಅಮರ್’ ಚಿತ್ರದ ಮೂಲಕ ನಾಯಕನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಸದ್ಯ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅಂದ ಹಾಗೆ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ದೂರದ ಊರುಗಳಿಂದ ಬರುವ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಇಲ್ಲಿವರೆಗೂ ಬರುವುದು ಬೇಡ. ಅಲ್ಲೆ ನಿಮ್ಮ ನಿಮ್ಮ ಊರಿನಲ್ಲಿಯೆ ಅಂಬರೀಶ್ ಹೆಸರಿನಲ್ಲಿ ಗಿಡ ನೆಟ್ಟು ಗೌರವ ಸಲ್ಲಿಸಿ ಅದೇ ಹುಟ್ಟುಹಬ್ಬ ಆಚರಿಸಿದಂತೆ ಎಂದು ಕೇಳಿಕೊಂಡಿದ್ದರು. ಆದರೆ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

Loading...

LEAVE A REPLY

Please enter your comment!
Please enter your name here